ನಾಗ್ಪುರ: ದತ್ತು ಪಡೆದ ಮೂವರು ಪುತ್ರಿಯರ ಮೇಲೆ, ಅತ್ಯಾಚಾರ ಎಸಗಿದ್ದ ನಿವೃತ್ತ ವಿಜ್ಞಾನಿಯನ್ನು, ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 72 ವರ್ಷದ ಮಕ್ಸೂದ್ ಅನ್ಸಾರಿ ಬಂಧಿತ ಆರೋಪಿ.
ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಸ್ಥೆಯ ಮಾಜಿ ಉದ್ಯೋಗಿಯಾಗಿರುವ ಮಕ್ಸೂದ್ ಅನ್ಸಾರಿ, ತನ್ನ ಮೇಲೆ ಚಿಕ್ಕ ವಯಸ್ಸಿನಿಂದಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ 16 ವರ್ಷದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆಯೊಂದಿಗೆ ಇದ್ದ 11 ವರ್ಷ ಮತ್ತು 7 ವರ್ಷದ ಬಾಲಕಿಯರನ್ನು ಕೂಡ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ಅನ್ಸಾರಿಗೆ ಇಬ್ಬರು ಪತ್ನಿಯರಿದ್ದರೂ ಮಕ್ಕಳಾಗಿರಲಿಲ್ಲವಾದ್ದರಿಂದ ಬಾಲಕಿಯರನ್ನು ದತ್ತು ಪಡೆದುಕೊಂಡಿದ್ದ.
ಆತನಿಂದ ಪತ್ನಿಯರು ದೂರವಾಗಿದ್ದಾರೆ. ಇದೀಗ ಬಾಲಕಿ, ಸ್ವಯಂ ಸೇವಾ ಸಂಸ್ಥೆಯೊಂದರ ನೆರವಿನಿಂದ ಪೊಲೀಸರ ಮೊರೆ ಹೋಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.