ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್ ಮೇಲೆ ಶಾಕ್ ನೀಡ್ತಾ ಇದೆ. ಪೆಟ್ರೋಲ್- ಡಿಸೇಲ್ ಆಯ್ತು. ಈಗ ಗ್ಯಾಸ್ ಸಿಲಿಂಡರ್ ಸರದಿ. ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ 1 ರೂಪಾಯಿ 97 ಪೈಸೆ ಹೆಚ್ಚಳವಾಗಿದೆ. ಜುಲೈ ನಂತ್ರ ಮೂರನೇ ಬಾರಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗ್ತಾ ಇದೆ.
ಸಬ್ಸಿಡಿಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 425.06 ರೂಪಾಯಿಯಾಗಿದೆ. ಬೆಂಗಳೂರಿನಲ್ಲಿ ಗ್ರಾಹಕರು ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ಗೆ 428 ರೂಪಾಯಿ 50 ಪೈಸೆ ತುಂಬ್ತಾ ಇದ್ದರು. ಈಗ ಎರಡು ರೂಪಾಯಿ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ಗಳ ವಿತರಣೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಈ ಏರಿಕೆಯನ್ನು ಮಾಡ್ತಾ ಇದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಪ್ರತಿ ತಿಂಗಳು ಸಣ್ಣ ಮೊತ್ತದ ಏರಿಕೆ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಆಗಸ್ಟ್ 16ರಂದು 1 ರೂಪಾಯಿ 93 ಪೈಸೆ ಏರಿಕೆಯಾಗಿತ್ತು. ಜುಲೈ 1ರಂದು 1 ರೂಪಾಯಿ 98 ಪೈಸೆ ಏರಿಕೆಯಾಗಿತ್ತು. ಹಾಗೆ ಸೀಮೆ ಎಣ್ಣೆ ಬೆಲೆಯಲ್ಲೂ ಏರಿಕೆಯಾಗಿದೆ. ದೇಶೀಯ ತೈಲ ಕಂಪೆನಿಗಳಿಗೆ 10 ತಿಂಗಳವರೆಗೆ ಪ್ರತಿ ತಿಂಗಳು 25 ಪೈಸೆಯಂತೆ ಸೀಮೆಎಣ್ಣೆ ಬೆಲೆಯನ್ನು ಹೆಚ್ಚಿಸಲು ಸೂಚಿಸಿದೆ. ಅದರಂತೆ ಸೀಮೆಎಣ್ಣೆ ಬೆಲೆಯಲ್ಲಿ ಕೂಡ ಏರಿಕೆಯಾಗಿದೆ.