ಪಾಕಿಸ್ತಾನದಲ್ಲಿ ಇನ್ಮೇಲೆ ಭಾರತದ ವಾಹಿನಿಗಳನ್ನು ನೋಡುವ ಅವಕಾಶವಿಲ್ಲ. ಲ್ಯಾಂಡಿಂಗ್ ಹಕ್ಕುಗಳಿಲ್ಲದೇ ಇರುವುದರಿಂದ ಪಾಕಿಸ್ತಾನ ಭಾರತದ ಟಿವಿ ಚಾನಲ್ ಗಳ ಪ್ರಸಾರವನ್ನು ನಿಲ್ಲಿಸಲಿದೆ.
ಹೊಸದಾಗಿ ಪಾಕಿಸ್ತಾನದಲ್ಲಿ ಡಿಟಿಎಚ್ ಸೇವೆಯನ್ನು ಆರಂಭಿಸಲಾಗ್ತಿದೆ. ಹೊಸ ನಿಯಮ ಪಾಲಿಸದೇ ಇರುವ ಕೇಬಲ್ ಆಪರೇಟರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಎಚ್ಚರಿಸಿದೆ. ಈ ಕ್ಷಣದಿಂದ್ಲೇ ಭಾರತೀಯ ಡಿಟಿಎಚ್ ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ.
ಭಾರತದ ಯಾವ ವಾಹಿನಿಗಳ ಬಳಿಯೂ ಲ್ಯಾಂಡಿಕ್ ಹಕ್ಕು ಇಲ್ಲದೇ ಇರುವುದರಿಂದ ಪ್ರಸಾರ ನಿಲ್ಲಿಸಲಾಗುತ್ತಿದೆ. ಕಾನೂನು ಅಗತ್ಯಗಳನ್ನೆಲ್ಲ ಪೂರೈಸಿಕೊಳ್ಳಲು ಕೇಬಲ್ ಆಪರೇಟರ್ ಗಳು ಮತ್ತು ಸ್ಯಾಟಲೈಟ್ ಚಾನಲ್ ಗಳಿಗೆ ಸಮಯ ನೀಡಲಾಗುತ್ತದೆ. ಅಷ್ಟರಲ್ಲಿ ಹೊಸ ನಿಯಮ ಅಳವಡಿಸಿಕೊಂಡು, ಭಾರತೀಯ ವಾಹಿನಿಗಳನ್ನು ಬಂದ್ ಮಾಡದೇ ಇದ್ರೆ ಕ್ರಮ ನಿಶ್ಚಿತ ಎನ್ನಲಾಗಿದೆ. ಕೇಬಲ್ ನಿರ್ವಾಹಕರಿಗೆಲ್ಲ ಅಕ್ಟೋಬರ್ 15 ಡೆಡ್ ಲೈನ್.