ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಡ್ರೆಸ್ ಹಾಗೂ ಸ್ಟೈಲ್ ಕಣ್ಣು ಕುಕ್ಕುತ್ತೆ. ಶ್ರೀಲಂಕಾದ ಈ ಬೆಡಗಿ ಚೆಂದದ ಬಟ್ಟೆಗಳನ್ನು ಎಲ್ಲಿ ಖರೀದಿಸ್ತಾಳೆ ಎಂಬ ಪ್ರಶ್ನೆ ಅಭಿಮಾನಿಗಳಿಗೇಳೋದು ಸಹಜ. ಇದಕ್ಕೆಲ್ಲ ಉತ್ತರ ಈಗ ಸಿಕ್ಕಿದೆ. ಜಾಕ್ವೆಲಿನ್ ಸ್ಟೈಲ್ ನ ಗುಟ್ಟು ಮುಂಬೈನ ಒಂದು ಗಲ್ಲಿಯಲ್ಲಿದೆ.
ಯಸ್, ಬಾಂದ್ರಾದ ಲಿಂಕ್ ರೋಡ್ ನಲ್ಲಿ ಬಟ್ಟೆ ಖರೀದಿಸ್ತಾಳೆ ಜಾಕ್ವೆಲಿನ್. ಮುಂಬೈನ ಲಿಂಕ್ ರಸ್ತೆ ಶಾಪಿಂಗ್ ಗೆ ಪ್ರಸಿದ್ದಿ ಪಡೆದಿದೆ. ಒಳ್ಳೊಳ್ಳೆ ಡಿಸೈನರ್ ಬಟ್ಟೆಗಳು ಕೂಡ ಅಲ್ಲಿ ನ್ಯಾಯ ಬೆಲೆಗೆ ಸಿಗುತ್ತೆ. ಲ್ಯಾಕ್ಮೆ ಫ್ಯಾಷನ್ ವೀಕ್ ನಲ್ಲಿ ಪಾಲ್ಗೊಂಡಿದ್ದ ಜಾಕ್ವೆಲಿನ್ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾಳೆ.
ಚೆಂದ ಚೆಂದದ ಬಟ್ಟೆಗಳನ್ನು ಎಲ್ಲಿ ಖರೀದಿಸ್ತೀರಾ ಎಂಬ ಪ್ರಶ್ನೆಗೆ ಜಾಕ್ವೆಲಿನ್ ಉತ್ತರ ನೀಡಿದ್ದಾಳೆ. ವಿಶ್ವದಾದ್ಯಂತ ನಾನು ಶಾಪಿಂಗ್ ಮಾಡ್ತೇನೆ. ಆದ್ರೆ ಬಾಂದ್ರಾದ ಲಿಂಕ್ ರೋಡ್ ನನ್ನ ಅಚ್ಚುಮೆಚ್ಚಿನ ಶಾಪಿಂಗ್ ಸ್ಥಳ ಎಂದಿದ್ದಾಳೆ. ಸದ್ಯವಷ್ಟೇ ಲಿಂಕ್ ರಸ್ತೆಯ ಶಾಪೊಂದರಲ್ಲಿ ಚಪ್ಪಲಿ ಖರೀದಿಸಿದ್ದಾಳಂತೆ ಜಾಕ್ವೆಲಿನ್.