ರಿಲಾಯೆನ್ಸ್ ಜಿಯೋ ಗೆ ಸೆಡ್ಡು ಹೊಡೆಯಲು ದೇಶದ ದೊಡ್ಡ ಟೆಲಿಕಾಮ್ ಕಂಪನಿ ಏರ್ ಟೆಲ್ 4ಜಿ ಮತ್ತು 3 ಜಿ ಇಂಟರ್ನೆಟ್ ದರಗಳನ್ನು ಪ್ರತಿಶತ 80 ರಷ್ಟು ಕಡಿತಗೊಳಿಸಿದೆ.
ಹೊಸ ಸ್ಕೀಮ್ ಅನುಸಾರ ಏರ್ ಟೆಲ್, 51 ರೂಪಾಯಿಗಳಿಗೆ 1 ಜಿಬಿ ಇಂಟರ್ನೆಟ್ ಡೇಟಾ ಕೊಡಲಿದೆ. ಈ ಸ್ಕೀಮ್ ಅನ್ನು ತಮ್ಮದಾಗಿಸಿಕೊಳ್ಳಲು ಬಯಸುವ ಗ್ರಾಹಕರು ಮೊದಲು 1,498 ರೂಪಾಯಿಗಳ ರೀ ಚಾರ್ಜ್ ಮಾಡಬೇಕಿದೆ.
ನಂತರ ಗ್ರಾಹಕರಿಗೆ 51 ರೂ. ಗಳಿಗೆ 28 ದಿನಗಳ ತನಕ 1 ಜಿಬಿಯ 4 ಜಿ ಅಥವಾ 3ಜಿ ಮೊಬೈಲ್ ಇಂಟರ್ನೆಟ್ ಸಿಗಲಿದೆ ಎಂದು ಕಂಪನಿ ಹೇಳಿದೆ. 1 ಜಿಬಿ ಡಾಟಾ ಖಾಲಿಯಾದ ನಂತರ ಗ್ರಾಹಕರು 12 ತಿಂಗಳ ತನಕ ಪ್ರತಿ ತಿಂಗಳು 51 ರೂಪಾಯಿಗಳ ದರದಲ್ಲಿ 4ಜಿ ಅಥವಾ 3 ಜಿ ಡಾಟಾ ರೀಚಾರ್ಜ್ ಮಾಡಬಹುದಾಗಿದೆ.