ಸಿನಿಮಾ ಒಂದರಲ್ಲಿ ಹಾಡುವ ಮೂಲಕ ಈಗಾಗಲೇ ಸ್ಯಾಂಡಲ್ ವುಡ್ ಗೆ ತೆರೆ ಹಿಂದೆ ಎಂಟ್ರಿ ಕೊಟ್ಟಿರುವ ಖ್ಯಾತ ನಟಿ ಶ್ರುತಿ ಹಾಸನ್, ತೆರೆಯ ಮೇಲೆಯೂ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ‘ಜಾಗ್ವಾರ್’ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಶ್ರುತಿ ಹಾಸನ್ ಭಾರೀ ನಿರೀಕ್ಷೆಯ ‘ಜಾಗ್ವಾರ್’ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್, ನಾಯಕನಟನಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ‘ಜಾಗ್ವಾರ್’ ಈಗಾಗಲೇ ಮೇಕಿಂಗ್ ನಿಂದಾಗಿ ಗಮನ ಸೆಳೆದಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಟೀಂ ನಲ್ಲಿದ್ದ ಮಹದೇವ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರವನ್ನು ಬಹುಕೋಟಿ ವೆಚ್ಛದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ. ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಘಟಾನುಘಟಿ ಕಲಾವಿದರು ನಟಿಸಿರುವ ಈ ಚಿತ್ರದಲ್ಲಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.