ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಒಳ ನುಗ್ಗಿದ ವ್ಯಕ್ತಿಯೊಬ್ಬ ರನ್ ವೇ ನಲ್ಲಿದ್ದ ಟ್ರಕ್ ಅಪಹರಿಸಿ ಅದನ್ನು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆಸಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಗುರುವಾರ ರಾತ್ರಿ ನೆಬ್ರಾಸ್ಕಾದ ಒಮಾಹಾ ಎಪ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಈತ ರನ್ ವೇ ಪ್ರವೇಶಿಸಿದ ಬಳಿಕ ಅಲ್ಲಿ ನಿಂತಿದ್ದ ಟ್ರಕ್ ಅಪಹರಿಸಿದ್ದಾನೆ. ನಂತರ ಅದನ್ನು ಚಲಾಯಿಸಿಕೊಂಡು ಹೋಗಿ ಹಾರಾಟಕ್ಕೆ ಸಿದ್ದವಾಗಿದ್ದ ಸೌತ್ ವೆಸ್ಟ್ ವಿಮಾನಕ್ಕೆ ಡಿಕ್ಕಿ ಹೊಡೆಸಿದ್ದಾನೆ.
ಇದರಿಂದಾಗಿ ವಿಮಾನದ ಮುಂಭಾಗಕ್ಕೆ ಹಾನಿಯಾಗಿರುವುದಲ್ಲದೇ ಕೆಳಗಿದ್ದ ವಿಮಾನ ನಿಲ್ದಾಣದ ಕೆಲ ಸಿಬ್ಬಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ 18 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಅಪಘಾತವೆಸಗಿದ ವ್ಯಕ್ತಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.