ಆಗ್ರಾದ ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಅಲ್ಲಿನ ಎಂಜಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ ಹೆಬ್ಬಾವು ಸೇರಿಕೊಂಡಿದ್ದು, ಬಳಿಕ ಅದನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ.
ಹೆಬ್ಬಾವನ್ನು ಕಂಡ ಗ್ರಾಹಕರು ಗಾಬರಿಗೊಂಡು ಎಟಿಎಂ ಸೆಕ್ಯುರಿಟಿ ಗಾರ್ಡ್ ಗೆ ವಿಷಯ ತಿಳಿಸಿದ್ದು, ಬಳಿಕ ಉರಗ ತಜ್ಞರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಧಾವಿಸಿ ಬಂದ ಅವರು ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ.
ಎಟಿಎಂ ಯಂತ್ರದ ಹಿಂದೆ ಸೇರಿಕೊಂಡಿದ್ದ ಈ ಹೆಬ್ಬಾವನ್ನು ಸೆರೆ ಹಿಡಿಯಲು ಪ್ರಯಾಸಪಡಬೇಕಾಯಿತಾದರೂ ಅಂತಿಮವಾಗಿ ಅದನ್ನು ಹಿಡಿದ ವೇಳೆ ಗ್ರಾಹಕರು ನಿಟ್ಟುಸಿರುಬಿಟ್ಟಿದ್ದಾರೆ. ಹೆಬ್ಬಾವನ್ನು ಕಾಡಿಗೆ ಬಿಡಲಾಗಿದೆ ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.