ವೋಲ್ವೋ ಟ್ರಕ್ಸ್ ನಿರ್ಮಾಣದ ಐರನ್ ನೈಟ್ಸ್ ಜಗತ್ತಿನ ಅತ್ಯಂತ ವೇಗದ ಲಾರಿ. ಕೇವಲ 21.29 ಸೆಕೆಂಡ್ ಗಳಲ್ಲಿ ಇದು 1000 ಮೀಟರ್ ಕ್ರಮಿಸಬಲ್ಲದು.
ಅಂದ್ರೆ ಗಂಟೆಗೆ 276 ಕಿಲೋ ಮೀಟರ್ ಚಲಿಸಬಲ್ಲ ಸಾಮರ್ಥ್ಯ ಐರನ್ ನೈಟ್ಸ್ ಲಾರಿಗಿದೆ. 4.5 ಟನ್ ಭಾರ ಹೊರಬಲ್ಲ ಸಾಮರ್ಥ್ಯ ಹೊಂದಿರುವ ಈ ಟ್ರಕ್ ಅನ್ನು ಅತ್ಯಂತ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. 2400 ಅಶ್ವ ಶಕ್ತಿ ಹೊಂದಿರುವ ಅತ್ಯಂತ ಪವರ್ ಫುಲ್ ಲಾರಿ ಇದು.
13 ಲೀಟರ್ ನ 6 ಡೀಸೆಲ್ ಸಿಲಿಂಡರ್, 4 ಟರ್ಬೋ ಚಾರ್ಜರ್ ಗಳೊಂದಿಗೆ ಐರನ್ ನೈಟ್ಸ್ ಎಂಜಿನ್ ನಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಈ ಟ್ರಕ್ ನಲ್ಲಿರುವ ಇನ್ನೊಂದು ವಿಶೇಷತೆ ಅಂದ್ರೆ ವೋಲ್ವೋದ ಐ-ಶಿಫ್ಟ್ ಡ್ಯೂಯಲ್ ಕ್ಲಚ್ ಟ್ರಾನ್ಸ್ ಮಿಷನ್. ಡ್ಯೂಯಲ್ ಕ್ಲಚ್ ತಂತ್ರಜ್ಞಾನ ತಡೆರಹಿತ ವೇಗವರ್ಧನೆಯನ್ನು ಸಕ್ರಿಯಗೊಳಿಸುತ್ತದೆ. ರೇಸಿಂಗ್ ಕಾರುಗಳಲ್ಲಿ ಇದು ಕಾಮನ್. ಆದ್ರೆ ಇದೇ ಮೊದಲ ಬಾರಿಗೆ ಟ್ರಕ್ ಗಳಲ್ಲಿ ಇದನ್ನು ಅಳವಡಿಸಲಾಗಿದೆ.