ನೆಸ್ಲೆ ಇಂಡಿಯಾದ ಮ್ಯಾಗಿ ನ್ಯೂಡಲ್ಸ್ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಆಟ ಶುರುಮಾಡಿದೆ. ಜೂನ್ ತಿಂಗಳಲ್ಲಿ ಶೇಕಡಾ 57 ರಷ್ಟು ಮಾರಾಟವಾಗಿರುವ ಮ್ಯಾಗಿ ನಂಬರ್ ಒನ್ ಸ್ಥಾನಕ್ಕೆ ಮತ್ತೆ ಮರಳಿದೆ.
ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಮ್ಯಾಗಿ ಮೇಲೆ ನಿಷೇಧ ಹೇರಿತ್ತು. ಇದು ಮ್ಯಾಗಿ ಮಾರಾಟದ ಮೇಲೆ ಪರಿಣಾಮ ಬೀರಿತ್ತು. ಆದ್ರೆ 9 ತಿಂಗಳ ಹಿಂದೆ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮ್ಯಾಗಿ ಪುನಃ ಗ್ರಾಹಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಹಿಂದಿನ ವರ್ಷ ನವೆಂಬರ್ ನಲ್ಲಿ ಮತ್ತೆ ಮ್ಯಾಗಿ ಮಾರುಕಟ್ಟೆಗೆ ಬಂದಾಗ ಅದ್ರ ಮಾರಾಟದ ಪ್ರಮಾಣ ಶೇಕಡಾ 10.9 ರಷ್ಟಿತ್ತು. ಡಿಸೆಂಬರ್ ನಲ್ಲಿ ಶೇಕಡಾ 35.2 ರಷ್ಟು ಮಾರಾಟವಾಗಿತ್ತು. 2016 ರ ಮಾರ್ಚ್ ನಲ್ಲಿ ಮಾರುಕಟ್ಟೆಯ ಶೇಕಡಾ 51 ರಷ್ಟು ಪಾಲನ್ನು ಮ್ಯಾಗಿ ಪಡೆದಿತ್ತು. ಅನೇಕ ಹೊಸ ರುಚಿಗಳನ್ನು ಬಿಡುಗಡೆ ಮಾಡ್ತಿರುವ ಮ್ಯಾಗಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ರಹಿತ ಮ್ಯಾಗಿಯನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.