ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ಇಂತದೊಂದು ಸಂದೇಶ ಹರಿದಾಡುತ್ತಿದೆ. Xiaomi Redmi 3S 32 GB ಸ್ಮಾರ್ಟ್ ಫೋನ್ ಕೇವಲ 599 ರೂಪಾಯಿಗಳಿಗೆ ಲಭ್ಯವಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.
ವಂಚಕರು, ಇದಕ್ಕಾಗಿ ಖ್ಯಾತ ಆನ್ ಲೈನ್ ಮಾರ್ಕೆಂಟಿಂಗ್ ಸಂಸ್ಥೆ ಅಮೆಜಾನ್ ಹೆಸರನ್ನು ಬಳಸಿಕೊಂಡಿದ್ದು, ಇದನ್ನು ನಂಬಿ ಅಮಾಯಕರು ಪಿಗ್ಗಿ ಬೀಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಷ್ಟು ಕಡಿಮೆ ಬೆಲೆಯಲ್ಲಿ Xiaomi Redmi 3S 32 GB ಸ್ಮಾರ್ಟ್ ಫೋನ್ ಲಭ್ಯವಾಗುತ್ತಿಲ್ಲ.
ಈ ಹೆಸರಿನಲ್ಲಿ ನಿಮ್ಮೆಲ್ಲಾ ಮಾಹಿತಿಗಳನ್ನುಕದಿಯುವ ತಂತ್ರ ಇದಾಗಿದೆ ಎನ್ನಲಾಗಿದೆ. ಇದನ್ನು ನಂಬಿ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಸಂಖ್ಯೆ, ಇ ಮೇಲ್ ಐಡಿ, ಮೊಬೈಲ್ ಸಂಖ್ಯೆ ಸೇರಿದಂತೆ ಅಮೂಲ್ಯ ಮಾಹಿತಿಗಳನ್ನು ನೀಡಿದರೆ ಮೋಸಕ್ಕೊಳಗಾಗುವುದು ಖಚಿತ. ಹಾಗಾಗಿ ಇಂತಹ ಸಂದೇಶ ಬಂದಲ್ಲಿ ನಿರ್ಲಕ್ಷಿಸುವುದೇ ಉಚಿತ.