ದಿನೇ ದಿನೇ ಹೊಸ ಹೊಸ ತಂತ್ರಜ್ಞಾನದಿಂದ ಕೂಡಿದ ಡಿವೈಸ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತವೆ. ಟಚ್ ಸ್ಕ್ರೀನ್, ಪ್ಯಾಟರ್ನ್ ಲಾಕ್ ಮುಂತಾದವುಗಳೆಲ್ಲ ಹೊಸ ತಂತ್ರಜ್ಞಾನದ ಪ್ರತ್ಯಕ್ಷ ಸಾಕ್ಷಿಗಳು. ಇಂತಹ ಅನೇಕ ಆಪ್ ಗಳು ನಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ.
ಇಂತಹುದೇ ಒಂದು ತಂತ್ರಜ್ಞಾನದಿಂದ ಗೋಡೆಯೊಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಹಾಗಾದರೆ…? ಆ ಕಾಲ ದೂರವಿಲ್ಲ. ಏಕೆಂದರೆ ಇಸ್ರೇಲ್ ನ ಒಂದು ಥ್ರಿ-ಡಿ ಸೆನ್ಸಾರ್ ಇಮೇಜಿಂಗ್ ಕಂಪನಿ ಗೋಡೆಯೊಳಗೆ ಇರುವ ವಸ್ತುಗಳನ್ನು ತೋರಿಸುವಂತ ಡಿವೈಸ್ ತಯಾರಿಸಿದೆ.
ಕಂಪನಿಯ ಮುಖ್ಯ ಕಾರ್ಯಾಧಿಕಾರಿ ಮತ್ತು ಸಹ ಸಂಸ್ಥಾಪಕ ರವೀವ್ ಮೆಲಾಮೆಡ್ ಅವರು, “ಈ ಡಿವೈಸ್ ಸಹಾಯದಿಂದ ಅಂಧರಿಗೆ ಅವರ ಮುಂದಿರುವ ವಸ್ತುವನ್ನು ತಿಳಿಯಲು ಸಹಾಯವಾಗುತ್ತದೆ. ಸ್ನಾನದ ಸಮಯದಲ್ಲಿ ಏನಾದರೂ ಅವಘಡ ಸಂಭವಿಸಿದಲ್ಲಿ ಈ ಡಿವೈಸ್ ನಿಮ್ಮನ್ನು ಅಲರ್ಟ್ ಮಾಡುತ್ತದೆ” ಎಂದಿದ್ದಾರೆ. ಕೇವಲ ಎಂಡ್ರಾಯ್ಡ್ ಫೋನ್ ಗಳಲ್ಲಿ ಕಾರ್ಯನಿರ್ವಹಿಸುವ ಈ ಡಿವೈಸ್ ಬೆಲೆ 200 ಡಾಲರ್ ಆಗಿದೆ.