ರಿಯೊ ಡಿ ಜನೈರೊದಲ್ಲಿ 17 ದಿನಗಳ ಕಾಲ ನಡೆದ ರಿಯೊ ಒಲಂಪಿಕ್ಸ್ ನಲ್ಲಿ 10 ಸಾವಿರದ ಐದು ನೂರು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. 33 ಜಾಗಗಳಲ್ಲಿ ನಡೆದ ಕ್ರೀಡೆಯನ್ನು ನೋಡಲು ಬರುವ ಪ್ರೇಕ್ಷಕರಿಗಾಗಿ ನಾಲ್ಕು ಲಕ್ಷ 50 ಸಾವಿರ ಕಾಂಡೋಮ್ ವ್ಯವಸ್ಥೆ ಮಾಡಲಾಗಿತ್ತು.
ಒಲಂಪಿಕ್ ಕಮಿಟಿ ಪರವಾಗಿ ಬೇಡಿಕೆ ಇಟ್ಟ ಕ್ರೀಡಾಪಟುಗಳಿಗೆ ಸರಾಸರಿ 42 ಕಾಂಡೋಮ್ ಹಂಚಲಾಗಿತ್ತು. ಮಹಿಳಾ ಕಾಂಡೋಮ್ ಗಳನ್ನು ಕೂಡ ಈ ಬಾರಿ ನೀಡಲಾಗಿದೆಯಂತೆ. 2012ರಲ್ಲಿ ಲಂಡನ್ ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಒಂದು ಲಕ್ಷ 50 ಸಾವಿರ ಕಾಂಡೋಮ್ ಹಂಚಲಾಗಿತ್ತು.
1988 ರ ಸಿಯೋಲ್ ಒಲಂಪಿಕ್ಸ್ ನಲ್ಲಿ ಮೊದಲ ಬಾರಿ ಕಾಂಡೋಮ್ ವಿತರಣೆ ಮಾಡಲಾಯ್ತು. ಆಗ 8500 ಕಾಂಡೋಮ್ ಗಳನ್ನು ವಿತರಿಸಲಾಗಿತ್ತು. ಒಲಂಪಿಕ್ಸ್ ಮನೆಯಲ್ಲಿ ಕಾಂಡೋಮ್ ಸಿಕ್ಕ ನಂತ್ರ ಒಲಂಪಿಕ್ಸ್ ಅಸೋಸಿಯೇಶನ್ ಔಟ್ ಡೋರ್ ಸೆಕ್ಸ್ ಗೆ ನಿಷೇಧ ಹೇರಿತ್ತು. ಇದಾದ ನಂತ್ರ ಕಾಂಡೋಮ್ ಬೇಡಿಕೆ ಹೆಚ್ಚಾಗ್ತಾ ಹೋಯ್ತು.
1992 ರ ಬಾರ್ಸಿಲೋನಾ ಒಲಂಪಿಕ್ಸ್ ನಲ್ಲಿ 90 ಸಾವಿರ ಕಾಂಡೋಮ್ ನೀಡಲಾಗಿತ್ತು. 2000 ನೇ ವರ್ಷದಲ್ಲಿ 70 ಸಾವಿರ ಕಾಂಡೋಮ್ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಬೇಡಿಕೆ ಜಾಸ್ತಿಯಾಗಿದ್ದರಿಂದ ಮತ್ತೆ 20 ಸಾವಿರ ಕಾಂಡೋಮ್ ತರಿಸಲಾಗಿತ್ತು. 2004 ರಲ್ಲಿ ಇದರ ಸಂಖ್ಯೆ 1 ಲಕ್ಷ 30 ಸಾವಿರ ತಲುಪಿತ್ತು.