ಉತ್ತರಾಖಂಡ್ ನ ಚಂಪಾವತ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಹೈಡ್ರಾಮಾ ನಡೆದಿದೆ. ಮಹಿಳೆ ಹಾಗೂ ಆಕೆ ಪ್ರೇಮಿಯ ಸಂಧಾನಕ್ಕೆ ಬಂದ ಪೊಲೀಸರೂ ಕೈಚೆಲ್ಲಿ ಕುಳಿತಿದ್ದಾರೆ.
ಬರೇಲಿ ಯುವಕನೊಂದಿಗೆ ಚಂಪಾವತ್ ಯುವತಿಯ ಮದುವೆ ಎರಡು ವರ್ಷಗಳ ಹಿಂದೆ ನಡೆದಿತ್ತು. ಮದುವೆಯಾಗಿ ಆರು ತಿಂಗಳ ನಂತ್ರ ಮಹಿಳೆ ಗಂಡನ ಮನೆಗೆ ಬಂದು ವಾಸವಾಗಿದ್ದಳು. ಮನೆ ಬಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ ಯುವಕನ ಮೇಲೆ ಮಹಿಳೆಗೆ ಪ್ರೀತಿ ಚಿಗುರಿದೆ.
ಪ್ರೀತಿಯಲ್ಲಿ ಮೈಮರೆತ ವಿವಾಹಿತ ಮಹಿಳೆಯ ಹೊಟ್ಟೆಯಲ್ಲಿ ಪ್ರೇಮಿಯ ಶಿಶು ಬೆಳೆದಿದೆ. ಈ ಬಗ್ಗೆ ಮಹಿಳೆ ಗಂಡನ ಮನೆಯವರಿಗೆ ತಿಳಿಸಿದ್ದಾಳೆ. ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ. ಮಹಿಳೆ ಪತಿಗೆ ವಿಚ್ಛೇದನ ನೀಡಿದ್ರೆ ಮಾತ್ರ ಆಕೆಯನ್ನು ಮನೆಗೆ ಕರೆದೊಯ್ಯುವುದಾಗಿ ಯುವಕ ಹೇಳಿದ್ದಾನೆ.
ಒಂಭತ್ತು ತಿಂಗಳ ನಂತ್ರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ದಾಖಲಿಸಿದಾಗ ಪ್ರೇಮಿ ತನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳುವವರೆಗೂ ಹೆರಿಗೆ ಮಾಡಿಸಿಕೊಳ್ಳುವುದಿಲ್ಲವೆಂದು ಮಹಿಳೆ ಹಠ ಹಿಡಿದಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಪ್ರೇಮಿಯನ್ನೂ ಕರೆಸಿದ್ದಾರೆ. ಆದ್ರೆ ಆತ ವಿಚ್ಛೇದನವಾಗ್ಲಿ ಎನ್ನುತ್ತಿದ್ದಾನೆ. ಈ ನಡುವೆ ಮಹಿಳೆಗೆ ಹೆರಿಗೆ ನೋವು ಜಾಸ್ತಿಯಾಗಿದ್ದರಿಂದ ವೈದ್ಯರು ಹೆರಿಗೆ ಮಾಡಿಸಿದ್ದಾರೆ.