ದೇಶದ ರಾಜಧಾನಿ ದೆಹಲಿ ಅನನ್ಯ ಸ್ಥಳವಾಗಿದೆ. ನೂರು ರೂಪಾಯಿಗೆ ಏನು ಬರುತ್ತೆ ಎನ್ನುವವರು ಅಲ್ಲಿ ಹೋಗಿ ಲೈಫ್ ಎಂಜಾಯ್ ಮಾಡಿಕೊಂಡು ಬರಬಹುದಾದಂತ ಅನೇಕ ಸ್ಥಳಗಳಿವೆ. ಇದ್ರಲ್ಲಿ ಸರೋಜಿನಗರ, ಪಹಾರ್ ಗಂಜ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಕೇವಲ ನೂರು ರೂಪಾಯಿಗೆ ನೀವು, ನಿಮ್ಮ ಕುಟುಂಬದವರು ರುಚಿ ರುಚಿ ತಿಂಡಿ ತಿಂದು ಬರಬಹುದು.
ಚೌಕಾಸಿ ಮಾಡುವುದರಲ್ಲಿ ನೀವು ಪರಿಣಿತರಿದ್ದರೆ ನಿಮಗೆ ಹೇಳಿ ಮಾಡಿಸಿದ ಸ್ಥಳ ಸರೋಜಿನಿ ನಗರ ಮಾರುಕಟ್ಟೆ. ಈ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುವುದಲ್ಲದೆ, ಅಲ್ಲಿನ ಬೆಲೆ ಕೇಳಿದ್ರೆ ನಿಮಗೆ ಖುಷಿಯಾಗೋದು ಗ್ಯಾರಂಟಿ.
ಚಾಂದನಿ ಚೌಕ್ ನ ಪರಾಟೆವಾಲಿ ಗಲ್ಲಿಯಲ್ಲಿ ಪರಾಟೆ ಹಾಗೂ ಕುಲ್ಫಿಯ ರುಚಿ ಇಡೀ ಭಾರತದಲ್ಲೇ ಪ್ರಸಿದ್ಧಿ ಪಡೆದಿದೆ. ಇನ್ನು ಪಹಾರ್ ಗಂಜ್ ಆಹಾರ ಪ್ರಿಯರಿಗೆ ಹೇಳಿ ಮಾಡಿಸಿ ಸ್ಥಳ. ಕೇಕ್ ಹಾಗೂ ಚಾಕಲೇಟ್ ಸಿರಪ್ ಬಾಯಿ ಚಪ್ಪರಿಸುವಂತೆ ಮಾಡುತ್ತೆ.
ಗರ್ಲ್ ಫ್ರೆಂಡ್ ಅಥವಾ ಕುಟುಂಬಸ್ಥರ ಜೊತೆ ಇಂಡಿಯಾ ಗೇಟ್ ಗೆ ಹೋದ್ರೆ ಅಲ್ಲಿನ ಪಾರ್ಕ್ ಬಳಿ ಮದರ್ ಡೈರಿ ಐಸ್ ಕ್ರೀಂ ಹಾಗೆ ಸ್ನ್ಯಾಕ್ಸ್ ಬಾಯಲ್ಲಿ ನೀರು ತರಿಸುತ್ತೆ.
100 ರೂಪಾಯಿ ಬಿಯರ್ ಜೊತೆ ದೆಹಲಿ ಸೌಂದರ್ಯವನ್ನು ಸವಿಯುವ ಅವಕಾಶ ಪಹಾರ್ ಗಂಜ್ ನಲ್ಲಿ ಸಿಗುತ್ತೆ. ಸೌಮ್ ಕೆಫೆಯಲ್ಲಿ ಬಿಯರ್ ಹೀರುತ್ತ ದೆಹಲಿಯನ್ನು ನೋಡಬಹುದಾಗಿದೆ.
ದೆಹಲಿ ಯುನಿವರ್ಸಿಟಿಯ ಉತ್ತರ ಕ್ಯಾಂಪಸ್ ನಲ್ಲಿರುವ ಜ್ಯೂವೆಲರಿ ಶಾಪ್ ಫ್ಯಾಷನ್ ಪ್ರಿಯರಿಗೆ ಬೆಸ್ಟ್. ಟ್ಯಾಟೂ ಹಾಗೂ ಇಯರಿಂಗ್ಸ್ ಸೇರಿದಂತೆ ಹೊಸ ಯುಗದ ಎಲ್ಲ ವಸ್ತುಗಳೂ ಇಲ್ಲಿ ಸಿಗುತ್ತವೆ.
ದರಿಯಾ ಗಂಜ್ ಸಂಡೇ ಬುಕ್ ಬಜಾರ್ ಗೆ ಹೋಗಿ ಬೇಕಾದಷ್ಟು ಪುಸ್ತಕ ಖರೀದಿ ಮಾಡಬಹುದು. ಸಂಡೇ ಬಜಾರ್ ನಲ್ಲಿ ಹೊಸ ಹಾಗೂ ಸೆಕೆಂಡ್ ಹ್ಯಾಂಡ್ ಪುಸ್ತಕಗಳು ಕಡಿಮೆ ಬೆಲೆಗೆ ದೊರೆಯುತ್ತದೆ.