ಮುಂಬೈ: ಒಂಟಿಯಾಗಿ ಪ್ರಯಾಣಿಸುತ್ತಿದ್ದ ವಿದೇಶಿ ಮಹಿಳೆಗೆ, ಲೈಂಗಿಕ ಕಿರುಕುಳ ನೀಡಿದ್ದ ಉಬರ್ ಕ್ಯಾಬ್ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಶಹಬಾಜ್ ಶೇಖ್ ಬಂಧಿತ ಆರೋಪಿಯಾಗಿದ್ದಾನೆ.
ಮುಂಬೈನ ಬಾಂದ್ರಾದಿಂದ ವರ್ಸೋವಾಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದೇಶಿ ಮಹಿಳೆಗೆ, ಶಹಬಾಜ್ ಶೇಖ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ಬಚಾವ್ ಆಗಿದ್ದು, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನಗಾದ ಕಿರುಕುಳದ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾಳೆ. ಆ ಪೋಸ್ಟ್ ಅನ್ನು ಆಕೆಯ ಗೆಳತಿ ಶೇರ್ ಮಾಡಿದ್ದು, ಅದಾದ ನಂತರ ವಿಷಯ ಬೆಳಕಿಗೆ ಬಂದಿದೆ. ಮಾರನೇ ದಿನ ವಿದೇಶಿ ಮಹಿಳೆ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ, ಲೈಂಗಿಕ ಕಿರುಕುಳ ನೀಡಿದ್ದ ಶಹಬಾಜ್ ಶೇಖ್ ನನ್ನು ಬಂಧಿಸಿದ್ದಾರೆ. ಉಬರ್ ಸಂಸ್ಥೆ ಆತನನ್ನು ಕೆಲಸದಿಂದ ವಜಾ ಮಾಡಿದೆ ಎಂದು ಹೇಳಲಾಗಿದೆ.