ಸ್ವಾಮಿ ಶಿವಾನಂದ ಅವರಿಗೆ ಈಗ 120 ವರ್ಷ. ಇಷ್ಟು ವಯಸ್ಸಾದರೂ ಅವರು ತುಂಬ ಹುರುಪಾಗಿದ್ದಾರೆ. ತಮ್ಮ ಆರೋಗ್ಯಕರ ದೇಹಕ್ಕೆ ಯೋಗವೇ ಕಾರಣ ಎಂದು ಅವರು ಹೇಳುತ್ತಾರೆ.
ಯೋಗದ ಜೊತೆಗೆ ಸೆಕ್ಸ್ ಮತ್ತು ಎಣ್ಣೆಯ ಪದಾರ್ಥಗಳನ್ನು ವರ್ಜಿಸಿ ಹೆಚ್ಚಿನ ಆಯುಷ್ಯ ಪಡೆಯಿರಿ ಎಂದು ಶಿವಾನಂದ ಅವರು ಹೇಳುತ್ತಾರೆ. ಅವರ ಬಳಿಯಿರುವ ಪಾಸ್ ಪೋರ್ಟ್ ನಲ್ಲಿರುವ ಮಾಹಿತಿಯ ಪ್ರಕಾರ ಅವರು 1896 ರಲ್ಲಿ ಹುಟ್ಟಿದ್ದಾರೆ. ಇಂದಿಗೂ ಅವರು ಹಲವು ಗಂಟೆಗಳ ಕಾಲ ಯೋಗ ಮಾಡಲು ಶಕ್ತರಾಗಿದ್ದಾರೆ.
ಇವರ ಹೆಸರನ್ನು ಗಿನ್ನಿಸ್ ಬುಕ್ ಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ದಾಖಲೆ ಚೀನಾದ ಜಿರೋಯಮನ್ ಕಿಮುರಾ ಎಂಬುವರ ಹೆಸರಿನಲ್ಲಿದೆ. ಅವರು 2013ರಲ್ಲಿ ನಿಧನರಾದರು. ಆಗ ಅವರಿಗೆ 116 ವರ್ಷ 54 ದಿನಗಳಾಗಿದ್ದವು. ಕಿಮುರಾ ನಂತರ ಈಗ ಇವರೇ ಹೆಚ್ಚಿನ ಆಯುಷ್ಯವಂತರಾಗಿದ್ದಾರೆ.
ಇವರ ಜನ್ಮದಾಖಲೆ ಬಗ್ಗೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಕೆಲವು ತೊಂದರೆಗಳು ಆಗಿವೆ. ಪವಿತ್ರ ಕಾಶಿಯಲ್ಲಿ ಇವರ ಜನನವಾಗಿತ್ತು. ಹುಟ್ಟಿನಿಂದಲೂ ಯಾರೂ ಇಲ್ಲದ ಇವರು ಆನಾಥರಾಗಿಯೇ ಜೀವನ ನಡೆಸುತ್ತ ಬಂದರು. “ಮೊದಲೆಲ್ಲ ಜನರು ಕಡಿಮೆ ವಸ್ತುಗಳ ಜೊತೆಗೆ ಸಾಕಷ್ಟು ಸಂತೋಷದಿಂದ ಇರುತ್ತಿದ್ದರು. ಆದರೆ ಈಗಿನ ಜನರು ಸಂತುಷ್ಟರಾಗಿಲ್ಲ ಇವರ ಬೇಕುಗಳಿಗೆ ಮಿತಿ ಇಲ್ಲ. ಜೊತೆಗೆ ಜನರಲ್ಲಿ ಆರೋಗ್ಯವೂ ಇಲ್ಲ. ನಾನು ಎಲ್ಲರೂ ಖುಷಿಯಿಂದ, ಸಂತುಷ್ಟರಾಗಿ ಆರೋಗ್ಯವಂತ ಜೀವನ ನಡೆಸುವುದನ್ನು ನೋಡಬೇಕು” ಎನ್ನುತ್ತಾರೆ ಶಿವಾನಂದ ಸ್ವಾಮಿ.