ಮನೆಯೇ ಮೊದಲ ಪಾಠ ಶಾಲೆ. ತಂದೆ, ತಾಯಿಯೇ ಮೊದಲ ಗುರು. ಇದನ್ನು ಆದರ್ಶವಾಗಿಟ್ಟುಕೊಂಡು ಸಾಗುತ್ತಿದ್ದಾರೆ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್. ಶಾರುಕ್ ತಮ್ಮ ಮಗ ಆರ್ಯನ್ ಎಂದೂ ಮರೆಯದ ಪಾಠವೊಂದನ್ನು ಹೇಳಿದ್ದಾರೆ.
ಸದ್ಯ ಆರ್ಯನ್ ದಕ್ಷಿಣ ಕ್ಯಾಲಿಫೋರ್ನಿಯಾ ತಲುಪಿದ್ದಾನೆ. ಅಲ್ಲಿನ ವಿವಿಯಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಲಿದ್ದಾನೆ ಆರ್ಯನ್. ಮಗ ಆರ್ಯನ್ ನನ್ನು ಕ್ಯಾಲಿಫೋರ್ನಿಯಾಕ್ಕೆ ಬಿಡಲು ಕುಟುಂಬ ಸಮೇತರಾಗಿ ಬಂದಿದ್ದಾರೆ ಶಾರುಕ್. ಕ್ಯಾಲಿಫೋರ್ನಿಯಾದಲ್ಲಿ ಕುಟುಂಬ ಫುಲ್ ಎಂಜಾಯ್ ಕೂಡ ಮಾಡಿದೆ.
ಇದೇ ವೇಳೆ ಶಾರುಕ್ ಇನ್ಟ್ರಾಗ್ರಾಮ್ ನಲ್ಲಿ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಕಾರಿನ ಹಿಂದೆ ಹಾಗೂ ಮುಂದಿನ ಸೀಟಿನಲ್ಲಿ ಶಾರುಕ್ ಹಾಗೂ ಆರ್ಯನ್ ಕುಳಿತಿದ್ದಾರೆ. ಅವರಿಬ್ಬರ ಮುಖ ಕನ್ನಡಿಯಲ್ಲಿ ಕಾಣಿಸ್ತಾ ಇದೆ. ಈ ಫೋಟೋವನ್ನು ಅಪ್ ಲೋಡ್ ಮಾಡಿರುವ ಶಾರುಕ್ ‘Objects in the mirror….r closest…sigh…!!! ಎಂದು ಬರೆದಿದ್ದಾರೆ.
ಕೆಲವೊಮ್ಮೆ ನಾವು ಎಷ್ಟೇ ದೂರವಿದ್ದರೂ ಹತ್ತಿರವಿದ್ದಂತೆ ಭಾಸವಾಗುತ್ತದೆ. ಆದ್ರೆ ಅದು ಭ್ರಮೆ ಮಾತ್ರ. ವಾಸ್ತವವಾಗಿ ಅವರು ನಮ್ಮಿಂದ ದೂರವೇ ಇರುತ್ತಾರೆಂಬುದನ್ನು ಮಗನಿಗೆ ಕಲಿಸ ಹೊರಟಿದ್ದಾರೆ ಶಾರುಕ್. ಕುಟುಂಬಸ್ಥರನ್ನು ಬಿಟ್ಟು ಕ್ಯಾಲಿಫೋರ್ನಿಯಾದಲ್ಲಿ ಉಳಿಯಲಿರುವ ಆರ್ಯನ್ ಫೋಟೋದಲ್ಲಿ ಬೇಸರದಲ್ಲಿರುವಂತೆ ಕಾಣ್ತಾ ಇದೆ.
ನೆಲದಿಂದ ಆಕಾಶ ಮುಟ್ಟಲು ಶಾರುಕ್ ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ತೊಂದರೆಗಳು ಎದುರಿಸಿದ್ದಾರೆ. ಇದನ್ನು ಮಗನಿಗೆ ತಿಳಿಸುವ ಪ್ರಯತ್ನದಲ್ಲಿದ್ದಾರೆ ಶಾರುಕ್ ಖಾನ್.