ವೇಶ್ಯಾವಾಟಿಕೆ ನಿಯಂತ್ರಿಸಲಾಗದಷ್ಟು ಬೇರು ಬಿಟ್ಟಿದೆ. ವೇಶ್ಯಾವಾಟಿಕೆ ತಡೆಗೆ ಏನೆಲ್ಲಾ ಕ್ರಮ ಕೈಗೊಂಡರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೆಲವು ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಮಾನ್ಯತೆ ಹೊಂದಿದೆ.
ಹಾವೋಸ್ಕೋಪ್ ರೀಸರ್ಚ್ ಇನ್ಸ್ ಟಿಟ್ಯೂಟ್ ವತಿಯಿಂದ ವಿಶ್ವದ ಆಯ್ದ ಮಹಾನಗರಗಳಲ್ಲಿ ವೇಶ್ಯಾವಾಟಿಕೆ ವಹಿವಾಟಿನ ಕುರಿತಾಗಿ ಅಧ್ಯಯನ ನಡೆಸಲಾಗಿದ್ದು, ಚೀನಾ ಮೊದಲ ಸ್ಥಾನದಲ್ಲಿದೆ. ಚೀನಾದಲ್ಲಿ ವೇಶ್ಯಾವಾಟಿಕೆ ನಿಷೇಧವಿದ್ದರೂ ಅಂದಾಜು 73 ಬಿಲಿಯನ್ ಡಾಲರ್ ನಷ್ಟು ವೇಶ್ಯಾವಾಟಿಕೆ ವಾರ್ಷಿಕ ವಹಿವಾಟು ನಡೆಯುತ್ತಿದೆ. ಅದೇ ರೀತಿ ಸೆಕ್ಸ್ ಟಾಯ್ಸ್ ಉತ್ಪಾದನೆಯಲ್ಲಿಯೂ ಚೀನಾ ಮುಂದಿದ್ದು, 2 ಬಿಲಿಯನ್ ಡಾಲರ್ ನಷ್ಟು ವಹಿವಾಟು ಹೊಂದಿದೆ ಎಂದು ಹೇಳಲಾಗಿದೆ.
ವಾರ್ಷಿಕವಾಗಿ 26.5 ಬಿಲಿಯನ್ ವಹಿವಾಟು ಹೊಂದಿರುವ ಸ್ಪೇನ್ ವೇಶ್ಯಾವಾಟಿಕೆಯಲ್ಲಿ 2ನೇ ಸ್ಥಾನದಲ್ಲಿದೆ. 24 ಬಿಲಿಯನ್ ಡಾಲರ್ ವಹಿವಾಟಿನ ಮೂಲಕ ಜಪಾನ್ 3ನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ದಕ್ಷಿಣ ಕೊರಿಯಾ, ಅಮೆರಿಕ, ಭಾರತ ಇವೆ ಎನ್ನಲಾಗಿದೆ.