ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ ಅರವತ್ತಾಯ್ತು ಅಂದ್ರೆ ನಿವೃತ್ತಿ ಕಾಮನ್. ಉದ್ಯೋಗಿಗಳ ನಿವೃತ್ತಿ ವಯಸ್ಸು 60ರ ಆಸುಪಾಸಿನಲ್ಲಿದೆ.
ಆದ್ರೆ ಜರ್ಮನಿಯಲ್ಲಿ ಮಾತ್ರ ಇನ್ಮೇಲೆ ವೃದ್ಧಾಪ್ಯದಲ್ಲೂ ಅಲ್ಲಿನ ಪ್ರಜೆಗಳು ಕೆಲಸ ಮಾಡಬೇಕಾಗಬಹುದು, 2060ರ ವೇಳೆಗೆಲ್ಲಾ ನೌಕರರ ನಿವೃತ್ತಿ ವಯಸ್ಸನ್ನು 69 ವರ್ಷಕ್ಕೆ ನಿಗದಿ ಪಡಿಸೋ ಸಾಧ್ಯತೆ ಇದೆ.
ಬಂಡೆಸ್ ಬ್ಯಾಂಕ್ ನ ಪ್ರಸ್ತಾವನೆ ಅಂಗೀಕಾರವಾದಲ್ಲಿ ಈ ನಿಯಮ ಜಾರಿಗೆ ಬರಲಿದೆ. ಸದ್ಯ ನಿವೃತ್ತಿ ವಯಸ್ಸು 65ರ ಆಸುಪಾಸಿನಲ್ಲಿದೆ. ಇದನ್ನು 69ಕ್ಕೆ ಏರಿಕೆ ಮಾಡದೇ ಇದ್ರೆ ಮುಂದಿನ ದಶಕಗಳಲ್ಲಿ ದೇಶಕ್ಕೆ ಸಮಸ್ಯೆ ತಪ್ಪಿದ್ದಲ್ಲ ಅನ್ನೋದು ತಜ್ಞರ ಅಭಿಪ್ರಾಯ.
ನಿವೃತ್ತಿ ವೇತನ ಬದ್ಧತೆಗಳನ್ನು ನಿಭಾಯಿಸುವಲ್ಲಿ ದೇಶಕ್ಕೆ ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಅವರು. 2030ರ ವೇಳೆಗೆ ಜರ್ಮನಿಯಲ್ಲಿ ನಿವೃತ್ತಿ ವಯಸ್ಸು 67ಕ್ಕೆ ಏರಿಕೆಯಾಗಲಿದೆ, ಬಳಿಕ ನಿಧಾನವಾಗಿ ಅದನ್ನು 69ಕ್ಕೆ ಏರಿಸಲಾಗುತ್ತದೆ. ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ನಿವೃತ್ತಿ ವಯಸ್ಸು 60ರ ಆಸುಪಾಸಿನಲ್ಲಿದೆ. ಸದ್ಯ ಫಿನ್ ಲ್ಯಾಂಡ್ ನಲ್ಲಿ ಮಾತ್ರ ನೌಕರರು 62-68 ವರ್ಷಗಳೊಳಗೆ ನಿವೃತ್ತಿ ಹೊಂದುತ್ತಿದ್ದಾರೆ. ಇದೀಗ ಜರ್ಮನಿ, ನಿವೃತ್ತಿ ವಯಸ್ಸನ್ನು 69ಕ್ಕೆ ಹೆಚ್ಚಿಸಲು ಯೋಜನೆ ರೂಪಿಸಿದ್ದು, ವೃದ್ಧಾಪ್ಯದಲ್ಲೂ ನೌಕರರಿಂದ ಸೇವೆ ಪಡೆದುಕೊಳ್ಳಲು ಮುಂದಾಗಿದೆ.