ರಿಲಯನ್ಸ್ ಜಿಯೋ, ಪ್ರಿಪೇಡ್ ಗ್ರಾಹಕರಿಗಾಗಿ ತನ್ನ 4ಜಿ ಸರ್ವೀಸ್ ಅನ್ನು ಆಗಸ್ಟ್ 15ರಂದು ಲಾಂಚ್ ಮಾಡಿದೆ. ಲಾಂಚ್ ಆಗುವ ಮೊದಲೇ ತನ್ನ ಆಫರ್ ಗಳಿಂದ ಗ್ರಾಹಕರನ್ನು ಸೆಳೆದಿದ್ದ ಈ ಕೊಡುಗೆಯಲ್ಲಿ 90 ದಿನಗಳ ಕಾಲ ಅನಿಯಮಿತ ಡಾಟಾ ಮತ್ತು ಕರೆ, ಸಂದೇಶಗಳು ಉಚಿತವಾಗಿರಲಿವೆ.
ತನ್ನ ಈ ಆಕರ್ಷಕ ಕೊಡುಗೆಯಿಂದ ರಿಲಯನ್ಸ್ ಟೆಲಿಕಾಮ್ ಇಂಡಸ್ಟ್ರಿ, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನ ಗಟ್ಟಿ ನೆಲೆ ಕಂಡುಕೊಂಡಿದೆ. ಇನ್ನೊಂದೆಡೆ ರಿಲಯನ್ಸ್ ಲೈಫ್ ಸಿರೀಸ್ ಸ್ಮಾರ್ಟ್ ಫೋನ್ ಗಳನ್ನು ಕೂಡ ಮಾರುಕಟ್ಟೆಗೆ ತಂದಿದೆ. 5000 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ಜಿಯೋ ಪ್ರಿವ್ಯೂ ಕೊಡುಗೆಯುಳ್ಳ ಲೈಫ್ ಸ್ಮಾರ್ಟ್ ಫೋನ್ ಸಿಗಲಿದೆ. ಅಂತಹ ಕೆಲವು ಫೋನ್ ಗಳ ಪಟ್ಟಿ ಇಲ್ಲಿದೆ.
ಫ್ಲೇಮ್ 1 – 4,199 ರೂಪಾಯಿ, ಫ್ಲೇಮ್ 2-3,599 ರೂ. ಫ್ಲೇಮ್ 3, 4, 5, 6 ಇವುಗಳು 2,999 ರೂಪಾಯಿ. ಫ್ಲೇಮ್ 7 – 3,499 ರೂಪಾಯಿ, ಫ್ಲೇಮ್ 8- 4,199 ರೂ., ವಿಂಡ್ 6 – 4,999 ರೂಪಾಯಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.