ವಡೋದರಾದ 20 ವರ್ಷದ ಯುವತಿ ‘ನನಗೆ ನನ್ನ ಪ್ರೇಮಿಯ ಮೇಲೆ ಯಾವುದೇ ಬೇಸರವಿಲ್ಲ. ಹೊಟ್ಟೆಯಲ್ಲಿನ ಮಗು ನಮ್ಮ ಪ್ರೇಮದ ಕುರುಹು. ಅದನ್ನು ನಾನು ಸಾಯಿಸುವುದಿಲ್ಲ’ ಎಂದು ಪಟ್ಟುಹಿಡಿದು ಕೂತಿದ್ದಾಳೆ.
ಮದುವೆಯಾಗದ ಈಕೆ 6 ತಿಂಗಳ ಗರ್ಭಿಣಿ. ಚಿಕಿತ್ಸೆಗೆಂದು ಇವಳನ್ನು ಸಯ್ಯಾಜಿ ಆಸ್ಪತ್ರೆಗೆ ಸೇರಿಸಲಾಗಿದೆ. ಇವಳಿಗೆ ಎಕ್ಲೆಂಪ್ಸಿಯಾ ಎಂಬ ರೋಗವಿದೆ. ಈ ರೋಗವಿರುವವರು ಗರ್ಭ ಧರಿಸಿದರೆ ಮುಂದೆ ತಾಯಿ, ಮಗು ಇಬ್ಬರಿಗೂ ತೊಂದರೆಯಾಗುತ್ತದೆ.
ಎಕ್ಲೆಂಪ್ಸಿಯಾ ರೋಗ ಇರುವ ಮಹಿಳೆಗೆ ಗರ್ಭಧಾರಣೆಯ ಸಮಯದಲ್ಲಿ ಅಧಿಕ ರಕ್ತದೊತ್ತಡವಾಗುತ್ತದೆ. ಗರ್ಭದಲ್ಲಿರುವ ಮಗು ಹಾಗೂ ತಾಯಿಗೆ ಪಿಟ್ಸ್ ಕೂಡ ಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ಇಬ್ಬರ ಜೀವಕ್ಕೂ ಹಾನಿಯಾಗುತ್ತದೆ ಎಂದು ಸಯ್ಯಾಜಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.