ವಾಹನಕ್ಕೆ ಪೆಟ್ರೋಲ್, ಡಿಸೇಲ್ ತುಂಬಿಸಿ ತುಂಬಿಸಿ ಜೇಬು ಖಾಲಿಯಾಯ್ತು ಅಂತಾ ಚಿಂತಿಸುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಇನ್ಮುಂದೆ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ತುಂಬಿಸಬೇಕಾಗಿಲ್ಲ. ಮೂತ್ರದಿಂದ ವಾಹನ ಓಡಲಿದೆ.
ಆಶ್ಚರ್ಯವಾದ್ರೂ ಇದು ಸತ್ಯ. ಸದ್ಯದಲ್ಲಿಯೇ ಮೂತ್ರದಿಂದ ಓಡುವ ವಾಹನವನ್ನು ನೀವು ನೋಡಬಹುದು. ಇಂಗ್ಲೆಂಡ್ ನ ಒಂದು ವಿಶ್ವವಿದ್ಯಾನಿಲಯದ ಸಂಶೋಧನೆಯೊಂದು ಮೂತ್ರದಿಂದ ವಾಹನ ಓಡಲಿದೆ ಎಂಬುದನ್ನು ಸಾಬೀತುಪಡಿಸಿದೆ. ಮೂತ್ರದಿಂದ ತಯಾರಾದ ಮಿಶ್ರಣದಿಂದ ಶಕ್ತಿ ಉತ್ಪಾದನೆಯಾಗಲಿದೆ. ಇದಕ್ಕೆ ರಾಸಾಯನಿಕವೊಂದನ್ನು ಮಿಕ್ಸ್ ಮಾಡಿದ್ರೆ ಶಕ್ತಿಯಾಗಿ ಅದು ಪರಿವರ್ತನೆಯಾಗಲಿದೆ. ಇದರಿಂದ ಫೋನ್ ಬ್ಯಾಟರಿ, ಎಲ್.ಇ.ಡಿ. ಬಲ್ಬ್ ಹಾಗೂ ಬ್ಯಾಟರಿಯಿಂದ ಚಲಿಸುವ ಗಾಡಿ ಕೂಡ ಓಡಲಿದೆಯಂತೆ.
ಇದು ಕಾರ್ಯರೂಪಕ್ಕೆ ಬಂದ್ರೆ ಮೂತ್ರಕ್ಕೂ ಬೆಲೆ ಬರಲಿದೆ. ಮೂತ್ರದಿಂದ ಓಡುವ ವಾಹನ ರಸ್ತೆಗಿಳಿಯಲಿದೆ.