ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಹುಟ್ಟುಹಬ್ಬದ ಸಂಭ್ರಮ. ಅರವಿಂದ್ ಕೇಜ್ರಿವಾಲ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1968 ಆಗಸ್ಟ್ 16ರಂದು ಹರ್ಯಾಣದ ಭಿವಾನಿಯಲ್ಲಿ ಜನಿಸಿದ ಕೇಜ್ರಿವಾಲ್ ಗೆ ಅಭಿಮಾನಿಗಳು, ಗಣ್ಯಾತಿಗಣ್ಯರು ಶುಭ ಕೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೆಹಲಿ ಸಿಎಂಗೆ ಶುಭಾಶಯ ಕೋರಿದ್ದಾರೆ. ಟ್ವಿಟರ್ ನಲ್ಲಿ ಪ್ರಧಾನಿ ಮೋದಿ, ಕೇಜ್ರಿವಾಲ್ ಗೆ ಶುಭ ಹಾರೈಸಿದ್ದಾರೆ.
ಕೇವಲ ಪಿಎಂ ಒಂದೇ ಅಲ್ಲ ಕ್ರಿಕೆಟಿಗ ಸೆಹ್ವಾಗ್ ಕೂಡ ಕೇಜ್ರಿವಾಲ್ ಗೆ ಶುಭ ಹಾರೈಸಿದ್ದಾರೆ. ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಉತ್ತಮ ಆರೋಗ್ಯ ಹಾಗೂ ಒಳ್ಳೆ ಕೆಲಸಗಳಾಗ್ಲಿ ಎಂದು ಆಶಿಸಿದ್ದಾರೆ. ಅಭಿಮಾನಿಗಳು ಸೇರಿದಂತೆ ಎಲ್ಲರಿಂದ ಶುಭಾಶಯಗಳು ಹರಿದು ಬರ್ತಾ ಇವೆ.
ಆಮ್ ಆದ್ಮಿ ಪಕ್ಷವನ್ನು ಕಟ್ಟಿ 2015ರಲ್ಲಿ ದೆಹಲಿ ಅಸೆಂಬ್ಲಿ ಎಲೆಕ್ಷನ್ ನಲ್ಲಿ 70 ಸೀಟಿನಲ್ಲಿ 67 ಸೀಟು ಗೆದ್ದು ಬಹುಮತ ಪಡೆಯುವ ಮೂಲಕ ದೆಹಲಿ ಸಿಎಂ ಆದ ಕೇಜ್ರಿವಾಲ್, ಕಂದಾಯ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದರು. ಸಮಾಜ ಸೇವೆ ಮೂಲಕ ಹೆಸರು ಗಳಿಸಿರುವ ಕೇಜ್ರಿವಾಲ್, 2012ರಲ್ಲಿ ಎಎಪಿ ಪಕ್ಷ ಕಟ್ಟಿದ್ದಾರೆ.