ರಾಜ್ಯ ಸಭಾ ಸದಸ್ಯತ್ವ ಹಾಗೂ ಬಿಜೆಪಿ ಗೆ ರಾಜೀನಾಮೆ ನೀಡಿದ್ದ ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಆಗಸ್ಟ್ 14 ರಂದು ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆಂದು ಹೇಳಲಾಗಿತ್ತಾದರೂ ಅದೀಗ ಮುಂದೂಡಲ್ಪಟ್ಟಿದೆ.
ಪಂಜಾಬ್ ವಿಧಾನ ಸಭಾ ಚುನಾವಣೆ ವೇಳೆ ಸಿದ್ದು ಅವರ ಪಾತ್ರದ ಕುರಿತಂತೆ ಚರ್ಚೆ ನಡೆಯುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ಸಿದ್ದು, ಮತ್ತೊಮ್ಮೆ ಕೇಜ್ರಿಯವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆಂದು ಹೇಳಲಾಗಿದೆ.
ಈ ಮಧ್ಯೆ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನವಜೋತ್ ಸಿಂಗ್ ಸಿದ್ದು ಅವರನ್ನು ಘೋಷಿಸಲು ಹಿಂದೇಟು ಹಾಕಿರುವುದು ಹಾಗೂ ಆಮ್ ಆದ್ಮಿ ಪಾರ್ಟಿಯ ಸಿದ್ದಾಂತದಂತೆ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಟಿಕೆಟ್ ಎಂಬ ನೀತಿಯನ್ವಯ ಸಿದ್ದು ಅಥವಾ ಅವರ ಪತ್ನಿ ನವಜೋತ್ ಸಿಂಗ್ ಕೌರ್ ಅವರ ಪೈಕಿ ಒಬ್ಬರಿಗೆ ಟಿಕೆಟ್ ನೀಡುವುದಾಗಿ ಹೇಳಿದ್ದು, ಸಿದ್ದು ಪಕ್ಷ ಸೇರ್ಪಡೆಗೆ ವಿಳಂಬವಾಗಲು ಎಂದು ಕಾರಣ ಹೇಳಲಾಗಿದೆ.