ಬಹುಭಾಷಾ ನಟ ಕಿಚ್ಚ ಸುದೀಪ್ ಹಾಗೂ ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಕೋಟಿಗೊಬ್ಬ-2’ ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆಯಾದ ದಿನವೇ ಸುಮಾರು 20 ಕೋಟಿ ರೂ. ಗಳಿಸಿತ್ತು.
‘ಕೋಟಿಗೊಬ್ಬ-2’ ಕಲೆಕ್ಷನ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ನಿರೀಕ್ಷೆ ಇದೆ. ಸುದೀಪ್, ಸೌತ್ ಇಂಡಿಯಾದಲ್ಲಿ ಮಿಂಚತೊಡಗಿದ್ದಾರೆ. ತಮಿಳುನಾಡಿನ ಪ್ರೇಕ್ಷಕರು ನಾಯಕನಾಗಿ ಎಂಟ್ರಿಕೊಟ್ಟ ‘ಮುಡಿಂಜಾ ಇವಾನ್ ಪುಡಿ’ ಸುದೀಪ್ ಗೆ ಭರ್ಜರಿ ಸ್ವಾಗತ ನೀಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲೂ ಸ್ಟಾರ್ ನಟ ಸುದೀಪ್ ಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಸಿನಿಮಾಗಳು ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತವೆ. ಅದೇ ರೀತಿ ‘ಕೋಟಿಗೊಬ್ಬ-2’ ಕೂಡ ಕಮಾಲ್ ಮಾಡುತ್ತಿದೆ.
ಮೊದಲ ದಿನವೇ ಸುಮಾರು 5 ಕೋಟಿ ರೂ ಗಳಿಸಿದ್ದ ‘ಕೋಟಿಗೊಬ್ಬ-2’ ಚಿತ್ರ 4 ದಿನದಲ್ಲಿ 20 ಕೋಟಿ ರೂ.ಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ. ರಾಜ್ಯದಲ್ಲಿ 350 ಕ್ಕೂ ಅಧಿಕ ಸೆಂಟರ್ ಗಳಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಚಿತ್ರ ತೆರೆ ಕಂಡಿತ್ತು.
ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ, ಶನಿವಾರ ವೀಕೆಂಡ್, ಭಾನುವಾರ ರಜೆ, ಸೋಮವಾರ ಸ್ವಾತಂತ್ರ್ಯ ದಿನಾಚರಣೆ ರಜೆ ಹೀಗೆ ಸಾಲು ಸಾಲು ರಜೆ ಬಂದ ಕಾರಣ ‘ಕೋಟಿಗೊಬ್ಬ-2’ ಕಲೆಕ್ಷನ್ ಜೋರಾಗಿದೆ. ಕನ್ನಡದ ‘ಕೋಟಿಗೊಬ್ಬ-2’ ಗಳಿಕೆಯಂತೆಯೇ ತಮಿಳಿನ ‘ಮುಡಿಂಜಾ ಇವಾನ್ ಪುಡಿ’ ಗಳಿಕೆಯೂ ಉತ್ತಮವಾಗಿದ್ದು, ಗಳಿಕೆಯಲ್ಲಿ ಹೊಸ ದಾಖಲೆ ಬರೆಯಲಿದೆ. ಕನ್ನಡದಲ್ಲಿ ಸುದೀಪ್ ಚಿತ್ರಗಳಲ್ಲಿ ಹೆಚ್ಚು ಗಳಿಕೆ ಕಂಡ ಚಿತ್ರ ಇದಾಗಲಿದೆ ಎಂದು ಹೇಳಲಾಗಿದೆ.