ಕೇರಳದಲ್ಲಿ ಅರಳಿದ ಈ ಹೂವನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. 9 ವರ್ಷಕ್ಕೊಮ್ಮೆ ಅರಳುವ ಈ ಹೂವಿನ ಹೆಸರು ಎಮೋರ್ಫೋಫೈಲಸ್ ಟೈಟೆನಮ್.
ರಾತ್ರಿಯ ಸಮಯದಲ್ಲೇ ಅರಳುವ ಈ ಹೂವಿನ ಆಯುಷ್ಯ ಕೇವಲ 48 ಗಂಟೆ ಮಾತ್ರ. ಅತೀ ದುರ್ಲಭವಾದ ಈ ಹೂವು ಇಂಡೋನೇಶಿಯಾದ ಕಾಡುಗಳಲ್ಲಿ ಮಾತ್ರ ಕಾಣಸಿಗುತ್ತದೆ. 3 ಮೀಟರ್ ನಷ್ಟು ಎತ್ತರವಿರುವ ಈ ಹೂವು ಜಗತ್ತಿನಲ್ಲೇ ಅತಿ ದೊಡ್ಡ ಹೂವು ಕೂಡ ಹೌದು.
ಮಳೆಗಾಲದಲ್ಲಿ ಅರಳುವ ಎಮೋರ್ಫೋಫೈಲಸ್ ಹೂವು ನೋಡಲು ಸುಂದರವಾದರೂ ಹಸಿಮಾಂಸದ ವಾಸನೆ ಬೀರುತ್ತದೆ. ಅಪರೂಪದ ಈ ಹೂವು ಈಗ ಕೇರಳದಲ್ಲಿ ಅರಳಿರುವುದರಿಂದ ಲಕ್ಷಾಂತರ ಜನ ಇದನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.