ಕಛೇರಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವನೊಬ್ಬ ಏಕಾಏಕಿ ಮಧ್ಯ ರಾತ್ರಿ ತನ್ನ ಕಣ್ಣ ಮುಂದೆ ನಡೆದ ಘಟನೆಗಳಿಂದ ಕಂಗಾಲಾಗಿದ್ದಾನೆ.
ಆತ ಕುಳಿತಿದ್ದ ಪಕ್ಕದ ಛೇರ್ ತನ್ನಷ್ಟಕ್ಕೆ ತಾನೇ ತಿರುಗಿದರೆ ಆತನ ಮುಂದಿದ್ದ ಪೇಪರ್ ಗಳು ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕಂಗಾಲಾದ ಆತ ಎದ್ದೇನೋ ಬಿದ್ದೇನೋ ಎಂಬಂತೆ ಅಲ್ಲಿಂದ ಓಡಿದ್ದಾನೆ. ಈ ದೃಶ್ಯಾವಳಿಗಳು ಕಛೇರಿಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.