ತನ್ನ 11 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮಂಗಳವಾರದಂದು ಭರ್ಜರಿ ಆಫರ್ ಘೋಷಿಸಿದೆ.
ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಈ ದರ ಅನ್ವಯವಾಗಲಿದ್ದು, ದೇಶಿಯ ವಿಮಾನ ಪ್ರಯಾಣ ದರ 511 ರೂ. ಗಳಿಂದ ಆರಂಭವಾದರೆ ವಿದೇಶ ಯಾನದ ದರ 2111 ರೂ. ಗಳಿಂದ ಆರಂಭವಾಗುತ್ತದೆ. ತೆರಿಗೆ ಹಾಗೂ ಶುಲ್ಕ ಪ್ರತ್ಯೇಕವಾಗಿರುತ್ತದೆ.
ಈ ಕೊಡುಗೆ ಮೇ 17 ರ ಇಂದಿನಿಂದ ಆರಂಭವಾಗಿದ್ದು, ಮೇ 19 ರ ಮಧ್ಯ ರಾತ್ರಿಯವರೆಗೆ ಬುಕ್ ಮಾಡಬಹುದಾಗಿದೆ. ಈ ಅವಧಿಯಲ್ಲಿ ಬುಕ್ ಮಾಡಿದವರು ಜೂನ್ 15, 2016 ರಿಂದ ಸೆಪ್ಟೆಂಬರ್ 30, 2016 ರವರೆಗೆ ದೇಶಿಯ ಪ್ರಯಾಣ ಹಾಗೂ ಜೂನ್ 1, 2016 ರಿಂದ ಜುಲೈ 20, 2016 ರವರೆಗೆ ವಿದೇಶ ಪ್ರಯಾಣ ಕೈಗೊಳ್ಳಬಹುದಾಗಿದೆ.