ನವದೆಹಲಿ: ವಿದೇಶಿ ಯುವತಿಯೊಬ್ಬಳನ್ನು ವಂಚಿಸಿ, ಅತ್ಯಾಚಾರ ಎಸಗಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿ ಅತ್ಯಾಚಾರ ಎಸಗುವಾಗ, ಆತನ ಪತ್ನಿ ದೃಶ್ಯವನ್ನು ಸೆರೆ ಹಿಡಿದ್ದಾಳೆ.
ದೆಹಲಿ ಮೂಲದ ಅಲ್ತಾಫ್ ಎಂಬಾತ ಫೇಸ್ ಬುಕ್ ಮೂಲಕ ಉಜ್ಬೇಕಿಸ್ತಾನದ 23 ವರ್ಷದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಯನ್ನು ಪ್ರೀತಿಸುವ ನಾಟಕವಾಡಿ ದೆಹಲಿಗೆ ಕರೆಸಿಕೊಂಡಿದ್ದಾನೆ. ಅಲ್ತಾಫ್ ಮಾತು ನಂಬಿದ ಯುವತಿ ದೆಹಲಿಗೆ ಬಂದಿದ್ದು, ಆಕೆಯನ್ನು ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಸಂದರ್ಭದಲ್ಲಿ ಆತನ ಪತ್ನಿ ದೃಶ್ಯವನ್ನು ಸೆರೆಹಿಡಿದಿದ್ದಾಳೆ.
ನಂತರ, ಬ್ಲಾಕ್ ಮೇಲ್ ಮಾಡಿ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದಾರೆ. ಆಕೆಯ ಪಾಸ್ ಪೋರ್ಟ್, ಹಣ ಕಸಿದುಕೊಂಡು ಒತ್ತಡ ಹೇರಿ, ಹಲ್ಲೆ ಮಾಡಿದ್ದಾರೆ. ಯುವತಿ ಹೇಗೋ ಪ್ರಯತ್ನಿಸಿ, ಸ್ನೇಹಿತರಿಗೆ ವಿಷಯ ತಿಳಿಸಿದ್ದಾಳೆ.
ಆಕೆಯ ಸ್ನೇಹಿತರು, ವಸಂತ್ ಕುಂಜ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಯುವತಿಯನ್ನು ರಕ್ಷಿಸಿದ್ದಾರೆ. ಅಲ್ತಾಫ್ ತಲೆಮರೆಸಿಕೊಂಡಿದ್ದು, ಆತನ ಪತ್ನಿಯನ್ನು ಬಂಧಿಸಲಾಗಿದೆ.