ವಿದ್ಯಾ ಬಾಲನ್ ಈಗ ‘ಬೇಗಮ್ ಜಾನ್’ ಸಿನಿಮಾ ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ವಿದ್ಯಾ ಮತ್ತೊಮ್ಮೆ ಅಭಿಮಾನಿಗಳನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.
ಈ ಸಿನಿಮಾದಲ್ಲಿ ವಿದ್ಯಾ, ರಾಣಿ ಲಕ್ಷ್ಮಿಬಾಯಿ, ರಜಿಯಾ ಸುಲ್ತಾನಾ ಹಾಗೂ ಮೀರಾಬಾಯಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬೇಗಮ್ ಜಾನ್’ ಸ್ರಿಜಿತ್ ಮುಖರ್ಜಿ ಅವರ ಬಂಗಾಳಿ ಸಿನಿಮಾ ರಾಜ್ ಕಹಿನಿಯ ಹಿಂದಿ ಅವತರಣಿಕೆ.
ಲಕ್ಷ್ಮಿಬಾಯಿ, ರಜಿಯಾ ಸುಲ್ತಾನಾ ಮತ್ತು ಮೀರಾಬಾಯಿ ಅವರ ಪಾತ್ರಕ್ಕಾಗಿ ವಿದ್ಯಾ ಬಾಲನ್ ಕೂಡ ಸಖತ್ ತಯಾರಿ ಮಾಡಿಕೊಂಡಿದ್ದಾರೆ. ಅವರ ಬಾಡಿ ಲಾಂಗ್ವೇಜ್, ಭಾಷೆ ಎಲ್ಲವನ್ನೂ ಅಭ್ಯಾಸ ಮಾಡಿದ್ದಾರೆ. ಅಷ್ಟೇ ಅಲ್ಲ ಕುದುರೆ ಸವಾರಿ ಕೂಡ ಕಲಿತಿದ್ದಾರೆ.
ಕಂಗನಾ ರನಾವತ್, ರಾಣಿ ಲಕ್ಷ್ಮಿಬಾಯಿ ಜೀವನಚರಿತ್ರೆ ಆಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ. ಸದ್ಯ ಕಂಗನಾ, ಸಿಮ್ರನ್ ಚಿತ್ರದಲ್ಲಿ ಬ್ಯುಸಿಯಾಗಿರೋದ್ರಿಂದ ಲಕ್ಷ್ಮಿಬಾಯಿ ಚಿತ್ರ ಇನ್ನೂ ಸೆಟ್ಟೇರಿಲ್ಲ. ಲಕ್ಷ್ಮಿಬಾಯಿ ಅವತಾರದಲ್ಲಿ ಕಾಣಿಸಿಕೊಳ್ಳಲಿರೋ ವಿದ್ಯಾ ಮತ್ತು ಕಂಗನಾ ಇಬ್ಬರ ಪೈಕಿ ಅಭಿಮಾನಿಗಳು ಯಾರಿಗೆ ಫುಲ್ ಮಾರ್ಕ್ಸ್ ಕೊಡ್ತಾರೋ ನೋಡ್ಬೇಕಿದೆ.