ಥಾಣೆ; ಅತ್ತೆ, ಸೊಸೆ ಎಂದ ಮೇಲೆ ಸಾಮಾನ್ಯವಾಗಿ ಜಗಳ ಇದ್ದೇ ಇರುತ್ತದೆ. ಮಗನೆಂದು ತಾಯಿ, ಗಂಡನೆಂದು ಪತ್ನಿ ಆಗಾಗ ಜಗಳವಾಡುವುದು ಸಹಜ. ಮಗ ತನಗಿಂತ ಹೆಚ್ಚಾಗಿ ಹೆಂಡತಿಯನ್ನೇ ಕೇರ್ ಮಾಡುತ್ತಿದ್ದಾನೆ ಎಂದುಕೊಂಡ ತಾಯಿ ಏನು ಮಾಡಿದ್ದಾಳೆ ನೋಡಿ.
ಮಗ ಹೆಂಡತಿಯನ್ನೇ ಹೆಚ್ಚಾಗಿ ಕೇರ್ ಮಾಡುತ್ತಿದ್ದರಿಂದ ಆಕ್ರೋಶಗೊಂಡ ಮಹಿಳೆ, ತನ್ನ ಸೊಸೆ ಹಾಗೂ ಆಕೆಯ ತಾಯಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ. ರಶೀದಾ ಅಕ್ಬರಾಲಿ ಕೊಲೆ ಮಾಡಿದ ಮಹಿಳೆ. ಈಕೆಯ ಪುತ್ರ ಮಕ್ದೂಬ್ ವಸಾನಿಗೆ 4 ವರ್ಷದ ಹಿಂದೆ ಮದುವೆಯಾಗಿದ್ದು, ಇವರಿಗೆ ಇತ್ತೀಚೆಗಷ್ಟೇ ಮಗು ಜನಿಸಿತ್ತು. ಮಗಳನ್ನು ಆರೈಕೆ ಮಾಡಲು ಆಕೆಯ ತಾಯಿ ಬಂದಿದ್ದು, ಈ ಸಂದರ್ಭದಲ್ಲಿ ಮಗ ಪತ್ನಿ ಮತ್ತು ಅತ್ತೆಯ ಬಗ್ಗೆ ಹೆಚ್ಚಿನ ಕಾಳಜಿ ತೋರಿದ್ದಾನೆ.
ಮನೆಯಲ್ಲಿ ತನಗಿಂತ ಸೊಸೆ ಮತ್ತು ಆಕೆಯ ತಾಯಿಗೆ ಪ್ರಾಮುಖ್ಯತೆ ಸಿಗುತ್ತಿದೆ ಎಂದು ಭಾವಿಸಿದ ರಶೀದಾ, ಸೊಸೆ ಸಲ್ಮಾ ಹಾಗೂ ಆಕೆಯ ತಾಯಿ ಶಮೀಮ್ ಅವರಿಗೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದಾಳೆ. ನಿದ್ದೆಯಲ್ಲಿದ್ದ ಇಬ್ಬರ ಕತ್ತು ಸೀಳಿ, ಸೊಸೆಯ ಕಿವಿ ಕೊಯ್ದು ಕೊಲೆ ಮಾಡಿದ್ದಾಳೆ. ಮುಂಬ್ರಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.