ಪುಣೆ: ಗಂಡ, ಹೆಂಡತಿ ಎಂದ ಮೇಲೆ ಜಗಳ, ಕೋಪ, ಮುನಿಸು ಸಾಮಾನ್ಯ. ಆದರೆ, ಇದೆ ಹೆಚ್ಚಾದರೆ, ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಪ್ರಕರಣದ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.
ಟೆಕ್ಕಿ ಪತ್ನಿಯ ಮಾಹಿತಿಯನ್ನೇ ಕಾಲ್ ಗರ್ಲ್ ವೆಬ್ ಸೈಟ್ ಗೆ ಭೂಪನೊಬ್ಬ, ಅಪ್ ಲೋಡ್ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.ಛತ್ತೀಸ್ ಗಢದ ಬಿಲಾಸ್ ಪುರ್ ನಿವಾಸಿಯಾಗಿರುವ 35 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನೇ ತನ್ನ ಟೆಕ್ಕಿ ಪತ್ನಿಯ ಮಾಹಿತಿಯನ್ನು ಕಾಲ್ ಗರ್ಲ್ ಸೇವೆ ನೀಡುವ ಕಂಪನಿಯ ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡಿದ್ದಾನೆ. ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ ಭೂಪ, ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೀಗೆಲ್ಲಾ ಮಾಡಿದ್ದಾನೆ ಎಂಬುದು ಗೊತ್ತಾಗಿದೆ.
ಕಾಲ್ ಗರ್ಲ್ ವೆಬ್ ಸೈಟ್ ಗೆ ಪತ್ನಿಯ ಮಾಹಿತಿ ಅಪ್ ಲೋಡ್ ಮಾಡಿದ ಭೂಪ, ತನಗೆ ಏನೂ ಗೊತ್ತಿಲ್ಲದಂತೆ ಮನೆಯಲ್ಲಿ ನಟಿಸಿದ್ದಾನೆ. ಪತ್ನಿಗೆ ಅಪರಿಚಿತರಿಂದ ನಿರಂತರವಾಗಿ ಅಶ್ಲೀಲ ಕರೆಗಳು ಬರತೊಡಗಿವೆ. ಆಕೆ ಪುಣೆಯ ಹಿಂಜೆವಾಡಿ ಪೊಲೀಸರಿಗೆ ದೂರು ನೀಡಿದ್ದು, ತನಗೆ ನಡೆಸಿದ ಪೊಲೀಸರಿಗೆ ಆಕೆಯ ಗಂಡನೇ ಪತ್ನಿಯ ಮಾಹಿತಿ ಅಪ್ ಲೋಡ್ ಮಾಡಿರುವುದು ಗೊತ್ತಾಗಿದೆ.