ಹನಿಮೂನ್ ಅಂದ್ಮೇಲೆ ಅಲ್ಲಿ ನವದಂಪತಿ ಅಂದ್ರೆ ಪತಿ, ಪತ್ನಿ ಇಬ್ಬರೂ ಇರ್ಬೇಕು. ಆದ್ರೆ ದೆಹಲಿಯ ಯುವಕ ಫೈಜಾನ್ ಪಟೇಲ್ ಒಂಟಿಯಾಗೇ ಹನಿಮೂನ್ ಗೆ ಹೊರಟಿದ್ದಾರೆ.
ಫೈಜಾನ್ ಪತ್ನಿಯೊಟ್ಟಿಗೆ ಯುರೋಪ್ ಸುತ್ತಿ ಬರೋಣ ಅಂತಾ ಪ್ಲಾನ್ ಮಾಡಿದ್ರು. ಆದ್ರೆ ಪತ್ನಿ ಸನಾಳ ಪಾಸ್ ಪೋರ್ಟ್ ಕಾಣೆಯಾಗಿತ್ತು. ಬೇರೆ ಯಾರೇ ಆಗಿದ್ರೂ ಪಾಸ್ ಪೋರ್ಟ್ ಇಲ್ಲ ಅಂದ್ಮೇಲೆ ಇನ್ನೇನು ಮಾಡಲು ಸಾಧ್ಯ ಅಂತಾ ಕೈಚೆಲ್ಲಿ, ಪ್ರವಾಸ ರದ್ದು ಮಾಡ್ತಾ ಇದ್ರು.
ಆದ್ರೆ ಫೈಜಾನ್ ಹಾಗೆ ಮಾಡಲಿಲ್ಲ. ಪತ್ನಿಯನ್ನು ಭಾರತದಲ್ಲೇ ಬಿಟ್ಟು ಒಬ್ಬಂಟಿಯಾಗೇ ಹನಿಮೂನ್ ಗೆ ಹೊರಟಿದ್ದಾರೆ. ವಿಮಾನದಲ್ಲಿ ಕುಳಿತ ಫೈಜಾನ್, ತನ್ನ ಪಕ್ಕದ ಸೀಟ್ ನಲ್ಲಿ ಪತ್ನಿ ಸನಾಳ ಫೋಟೋ ಹಿಡಿದು ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯ ಕೋರಿದ್ದಾರೆ.
ಇದನ್ನು ನೋಡಿದ ಸುಷ್ಮಾ ಸ್ವರಾಜ್ ಕೂಡಲೇ ಪ್ರತಿಕ್ರಿಯಿಸಿದ್ದಾರೆ, ಅಷ್ಟೇ ಅಲ್ಲ ಆದಷ್ಟು ಬೇಗ ಪತ್ನಿ ನಿಮ್ಮ ಪಕ್ಕದಲ್ಲಿರುವಂತೆ ನೋಡಿಕೊಳ್ಳುವುದು ನನ್ನ ಜವಾಬ್ಧಾರಿ ಎಂದಿದ್ದಾರೆ. ಜೊತೆಗೆ ಡೂಪ್ಲಿಕೇಟ್ ಪಾಸ್ ಪೋರ್ಟ್ ವಿತರಿಸುವುದಾಗಿಯೂ ಅಭಯವಿತ್ತಿದ್ದಾರೆ. ಸುಷ್ಮಾ ಸ್ವರಾಜ್ ಒಬ್ಬ ದಕ್ಷ ಸಚಿವೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.