ಇಂದು ನಾಗರ ಪಂಚಮಿ. ಹುತ್ತಕ್ಕೆ ಹಾಲೆರೆದು ಭಕ್ತರು ಪೂಜೆ ಸಲ್ಲಿಸುತ್ತಾರೆ. ಆಷಾಡದ ಬಳಿಕ ಆರಂಭವಾಗುವ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ. ಆದರೆ ಈ ಪುಟ್ಟ ಮಕ್ಕಳ ಪಾಲಿಗೆ ಮಾತ್ರ ನಿತ್ಯವೂ ನಾಗರ ಪಂಚಮಿಯೇ.
ಕಲ್ಲು ನಾಗನ ಪೂಜಿಸುವರಯ್ಯ..ದಿಟ ನಾಗನ ಕಂಡರೆ ಕೊಲ್ಲುವರಯ್ಯ… ಎಂಬ ಗಾದೆ ಮಾತಿದೆ. ಆದರೆ ಹಾವಾಡಿಗರ ಮಕ್ಕಳು ಮಾತ್ರ ನಿತ್ಯವೂ ಜೀವಂತ ಹಾವುಗಳ ಜೊತೆ ಆಟವಾಡುತ್ತಾರೆ. ಇವರುಗಳ ನಿತ್ಯ ಜೀವನ ಆರಂಭವಾಗುವುದೇ ಹಾವುಗಳ ಜೊತೆ. ಅವುಗಳೇ ಇವರ ಸಂಗಾತಿಗಳು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು, ನೋಡುಗರ ಎದೆ ಬಡಿತವನ್ನು ಹೆಚ್ಚಿಸುತ್ತದೆ. ವಿಷಪೂರಿತ ಹಾವುಗಳ ಜೊತೆ ಈ ಮಕ್ಕಳು ಆಟವಾಡುತ್ತಿರುವುದನ್ನು ಕಂಡರೆ ಒಂದು ಕ್ಷಣ ಮೈ ಬೆವರುತ್ತದೆ. ಆಂಧ್ರ ಪ್ರದೇಶದ ಹಳ್ಳಿಯೊಂದರಲ್ಲಿ ಈ ವಿಡಿಯೋ ತೆಗೆಯಲಾಗಿದೆ ಎನ್ನಲಾಗಿದ್ದು, ಅದೀಗ ವೈರಲ್ ಆಗಿದೆ.