ಭಾರತದಲ್ಲಿ ಬಡತನ ಎಷ್ಟರ ಮಟ್ಟಿಗಿದೆ ಎನ್ನುವುದನ್ನು ಈ ಸ್ಟೋರಿ ಸ್ಪಷ್ಟಪಡಿಸುತ್ತದೆ. ಆಲಿಗಢದಲ್ಲಿ ಎರಡು ಹೊತ್ತಿನ ಊಟಕ್ಕಾಗಿ ಮಹಿಳೆಯೊಬ್ಬಳು ಗರ್ಭದಲ್ಲಿರುವ ಶಿಶುವನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ.
ರಿಜ್ವಾನಾ ಅಲಿಯಾಸ್ ಸೋನಿ ಎಂಬ ಮಹಿಳೆಯೇ ಹೊಟ್ಟೆಯಲ್ಲಿರುವ ಗರ್ಭವನ್ನೇ ಮಾರಲು ಮುಂದಾಗಿದ್ದಾಳೆ. ಆಕೆ ಗಂಡ ಕೂಲಿ ಕೆಲಸ ಮಾಡ್ತಾನೆ. ನಾಲ್ಕೈದು ತಿಂಗಳು ಮನೆಗೆ ಬರುವುದಿಲ್ಲವಂತೆ. ಬಂದಾಗಲೂ ಹೊಡೆದು ಬಡಿದು ಹಿಂಸೆ ನೀಡ್ತಾನಂತೆ. ರಿಜ್ವಾನಾಗೆ ಈಗಾಗಲೇ ಒಂದು ಮಗುವಿದೆ.
ಈ ನಡುವೆ ಸರಿಯಾಗಿ ಬಾಡಿಗೆ ನೀಡದ ಕಾರಣ ಆಕೆಯನ್ನು ಮನೆ ಮಾಲೀಕ ಮನೆಯಿಂದ ಹೊರ ಹಾಕಿದ್ದಾನೆ. ರಿಜ್ವಾನಾ ಸದ್ಯ ಸಹೋದರಿ ಮನೆಯಲ್ಲಿದ್ದಾಳೆ. ಆದ್ರೆ ಅಲ್ಲಿ ತುಂಬಾ ದಿನ ಇರಲು ಸಾಧ್ಯವಿಲ್ಲ. ಹಾಗಾಗಿ ಎಂಟು ತಿಂಗಳ ಗರ್ಭಿಣಿ ರಿಜ್ವಾನಾ ತನ್ನ ಹೊಟ್ಟೆಯಲ್ಲಿರುವ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಳೆ.
ಸ್ಥಳೀಯ ಆಡಳಿತದ ನೆರವು ಕೇಳಿದ್ದಾಳೆ ರಿಜ್ವಾನಾ. ಸ್ಥಳೀಯ ಆಡಳಿತ ಆಕೆ ನೋವಿಗೆ ಸ್ಪಂದಿಸುತ್ತಿದೆ. ಮಹಿಳೆಗೆ ಎಲ್ಲ ರೀತಿಯ ನೆರವು ನೀಡಲು ನಿರ್ಧರಿಸಿದೆ.