ನವದೆಹಲಿ: ಕಾರು ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅನುಪಮಾ ವರ್ಮಾ, 11 ವರ್ಷದ ಬಾಲಕನ ಸಾವಿಗೆ ಕಾರಣರಾಗಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಭಗಿನಿ ನಿವೇದಿತಾ ಕಾಲೇಜಿನ ಪ್ರೊಫೆಸರ್ ಆದ ಅನುಪಮಾ ನಜಫಗಢದ ಚವ್ವಾಲಾ ರೋಡಿನಲ್ಲಿ ಟರ್ನ್ ತೆಗೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಅವರು, ಎದುರಿನಿಂದ ಸೈಕಲ್ ನಲ್ಲಿ ಬಂದ 11 ವರ್ಷದ ನಿತೀಶ್ ಮನ್ ಮೇಲೆ ಕಾರು ಚಲಾಯಿಸಿದ್ದಾರೆ.
ಅನುಪಮಾ ಅವರಿಗೆ ನಿತೀಶ್ ಕಾರಿನ ಕೆಳಗಡೆ ಸಿಕ್ಕಿಬಿದ್ದಿದ್ದಾನೆಂದು ತಿಳಿಯಲೇ ಇಲ್ಲ. ಹಾಗಾಗಿ ಅವರು ಕಾರನ್ನು ರಿವರ್ಸ್ ತೆಗೆದುಕೊಂಡಿದ್ದಾರೆ. ಆಗ ಎರಡನೇ ಬಾರಿಗೆ ಕಾರು ಮತ್ತೆ ನಿತೀಶ್ ಮೇಲೆ ಹಾದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರಕರಣ ಜನಫಗಢ ಠಾಣೆಯಲ್ಲಿ ದಾಖಲಾಗಿದೆ.