ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಗೇಲ್ ಹೊಸ ದಾಖಲೆಯೊಂದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ Jamaica Tallawahs ಹಾಗೂ Trinbago Knight Riders ನಡುವೆ ನಡೆಯುತ್ತಿರುವ ಎರಡನೇ ಅರ್ಹತಾ ಪಂದ್ಯದಲ್ಲಿ ಗೇಲ್ ದಾಖಲೆ ಬರೆದಿದ್ದಾರೆ. ಗೇಲ್ ತಮ್ಮ ಜಮೈಕಾ ತಂಡಕ್ಕಾಗಿ 35 ರನ್ ಪೇರಿಸಿದ್ರು. ಅದ್ರಲ್ಲಿ ಮೂರು ಸಿಕ್ಸರ್ ಬಾರಿಸುವ ಮೂಲಕ ದಾಖಲೆ ಬರೆದ್ರು.
ಇಂದು ಮೂರು ಸಿಕ್ಸರ್ ಬಾರಿಸುವ ಮೂಲಕ ಟ್ವೆಂಟಿ-20 ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಗೇಲ್ ಪಾತ್ರರಾಗಿದ್ದಾರೆ. ಕ್ರಿಸ್ ಗೇಲ್ ಈವರೆಗೆ 700 ಸಿಕ್ಸರ್ ಬಾರಿಸಿದ ಮೊದಲ ಹಾಗೂ ಏಕೈಕ ಆಟಗಾರನಾಗಿದ್ದಾರೆ. ವೆಸ್ಟ್ ಇಂಡೀಸ್ ನ ಇನ್ನೊಬ್ಬ ಆಟಗಾರ ಕೀರನ್ ಪೊಲಾರ್ಡ್ ಎರಡನೇ ಸ್ಥಾನದಲ್ಲಿದ್ದಾರೆ.