ಭಾರತ ಸರ್ಕಾರದ ‘ಮೈ ಗವರ್ನಮೆಂಟ್ ಇನ್ ಸಿಟಿಜನ್ ಎಂಗೇಜ್ಮೆಂಟ್ ಫ್ಲಾಟ್ ಫಾರಂ’ ನಲ್ಲಿ ಗೂಡ್ಸ್ ಸರ್ವೀಸ್ ಟ್ಯಾಕ್ಸ್ ಕುರಿತು ಸಾರ್ವಜನಿಕರ ಸಲಹೆ, ಸೂಚನೆಗೆ ಆಹ್ವಾನ ನೀಡಲಾಗಿತ್ತು.
ಇದರಲ್ಲಿ ತೆರಿಗೆ ಸಲಹೆಗಾರ ವಿನಯ್ ಜಿ. ಹೆಗಡೆ ಬಸವನಕಟ್ಟೆ ಇವರು ಟ್ಯಾಕ್ಸ್ ಕುರಿತು ಸಲಹೆ ಮಂಡಿಸಿದ್ದರು. ವಿನಯ ಅವರು ಮಂಡಿಸಿದ ಸಲಹೆಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ದೊರೆತಿದೆ. ಈ ಸಲಹೆಯನ್ನು ದೆಹಲಿಯಲ್ಲಿ ಮಂಡಿಸಬೇಕೆಂದು ಅವರಿಗೆ ಕರೆ ಕೂಡ ಬಂದಿದೆ.
ಆಗಸ್ಟ್ 6 ರ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿರುವ ವಿನಯ್, ದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ತಮ್ಮ ಸಲಹೆ ಮಂಡಿಸಲಿದ್ದಾರೆ.