ಇದೊಂದು ಕುತೂಹಲದ ಸುದ್ದಿ. ತಲೆ ಕಟ್ ಆದ್ರೂ ಕೋಳಿ ಓಡಾಡುತ್ತೆ ಅಂದ್ರೆ ಅದರಲ್ಲೇನೋ ಅಚ್ಚರಿ ಇರಲೇಬೇಕು.
ಈ ವಿಲಕ್ಷಣ ಘಟನೆ ನಡೆದಿದ್ದು ಚೀನಾದ ಬೀಜಿಂಗ್ ನಲ್ಲಿ. ತಲೆಯೇ ಇಲ್ಲದಿದ್ರೆ ಯಾರ ಪ್ರಾಣವೂ ಉಳಿಯೋಕೆ ಸಾಧ್ಯವೇ ಇಲ್ಲ. ಆದ್ರೆ ಬೀಜಿಂಗ್ ನಲ್ಲಿ ಕೋಳಿಯೊಂದರ ತಲೆಯನ್ನು ಸಂಪೂರ್ಣ ಕತ್ತರಿಸಲಾಗಿತ್ತು. ಕತ್ತಿನಿಂದ ರಕ್ತ ಸುರಿಯುತ್ತಿತ್ತು. ಆ ಕೋಳಿ ಬಿದ್ದು ಒದ್ದಾಡ್ತಾ ಇತ್ತೇನೋ ಅಂದ್ಕೋಬೇಡಿ.
ತಲೆ ಕಟ್ ಆಗಿದ್ರೂ ಅದು ಮಾಮೂಲಿಯಾಗಿ ಓಡಾಡುತ್ತಿತ್ತು. ಈ ದೃಶ್ಯ ನೋಡಿ ಸುತ್ತಮುತ್ತ ಇದ್ದವರಿಗೆಲ್ಲ ಅಚ್ಚರಿಯೋ ಅಚ್ಚರಿ. ಕೋಳಿ ಮಾಡಿದ ಪವಾಡ ನೋಡಲು ಜನ ದೌಡಾಯಿಸಿ ಬಂದ್ರು. ಇದಕ್ಕೇನಾದ್ರೂ ವೈಜ್ಞಾನಿಕ ಕಾರಣವಿದ್ಯಾ ಅಥವಾ ಇದೊಂದು ಪವಾಡವೇ ಅನ್ನೋ ಪ್ರಶ್ನೆ ಜನರನ್ನು ಕಾಡ್ತಾ ಇತ್ತು. ತಲೆಯಿಲ್ಲದ ಕೋಳಿ ನಡೆದಾಡುವ ದೃಶ್ಯ ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ.