ಅಲ್ಲಾಹ್ ನನ್ನು ನೆನೆದಿದ್ದಕ್ಕೆ ಮುಸ್ಲಿಂ ದಂಪತಿಯನ್ನು ವಿಮಾನದಿಂದ್ಲೇ ಹೊರಹಾಕಿದ ಅಮಾನವೀಯ ಘಟನೆ ಚಿಕಾಗೋದಲ್ಲಿ ನಡೆದಿದೆ.
ಡೆಲ್ಟಾ ಏರ್ ಲೈನ್ಸ್ ಗೆ ಸೇರಿದ ಈ ವಿಮಾನ ಪ್ಯಾರಿಸ್ ನಿಂದ ಸಿನ್ಸಿನಾಟಿಗೆ ಹೊರಟಿತ್ತು. ಚಿಕಾಗೋದಲ್ಲಿ ತಮ್ಮನ್ನು ಬಲವಂತವಾಗಿ ವಿಮಾನದಿಂದ ಕೆಳಕ್ಕಿಳಿಸಲಾಗಿದೆ ಅಂತಾ ನಾಝಿಯಾ ಹಾಗೂ ಫೈಸಲ್ ದಂಪತಿ ಆರೋಪಿಸಿದ್ದಾರೆ.
ನಾಝಿಯಾ ತನ್ನ ಪೋಷಕರಿಗೆ ಮೆಸೇಜ್ ಕಳಿಸಿ, ಹೆಡ್ ಫೋನ್ ಹಾಕಿ ಕುಳಿತಿದ್ರಂತೆ. ಆಕೆ ತಲೆಗೆ ಸ್ಕಾರ್ಫ್ ಕಟ್ಟಿಕೊಂಡಿದ್ದಾಳೆ, ಜೊತೆಗೆ ಫೋನ್ ಬಳಸುತ್ತಿದ್ದಾಳೆ. ಆಕೆಯ ಪತಿ ಫೈಸಲ್ ಬೆವರುತ್ತಿದ್ದಾನೆ. ಹಾಗಾಗಿ ಅವರ ಪಕ್ಕದಲ್ಲಿ ಕುಳಿತುಕೊಳ್ಳಲು ಅಸಾಧ್ಯ ಅಂತಾ ವಿಮಾನದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಪೈಲಟ್ ಬಳಿ ದೂರಿದ್ದಾರೆ.
ಪದೇ ಪದೇ ಅವರು ಅಲ್ಲಾಹ್ ಎಂದು ಸ್ಮರಿಸುತ್ತಿದ್ದುದಕ್ಕೂ ಆಕ್ಷೇಪ ವ್ಯಕ್ತವಾಯ್ತು. ಅವರನ್ನು ವಿಮಾನದಿಂದ ಕೆಳಕ್ಕಿಳಿಸುವಂತೆ ಪಟ್ಟು ಹಿಡಿದ್ರು. ವಿಚಾರಣೆ ನೆಪದಲ್ಲಿ ತಮ್ಮನ್ನು ಕೆಳಕ್ಕಿಳಿಸಿದ್ದಾರೆ ಅಂತಾ ನಾಝಿಯಾ ಆರೋಪಿಸಿದ್ದಾರೆ. ಈ ಬಗ್ಗೆ ಬಳಿಕ ದೂರು ಕೂಡ ದಾಖಲಾಯ್ತು. ಘಟನೆ ಬಗ್ಗೆ ಕ್ಷಮೆ ಕೋರಿರುವ ವಿಮಾನಯಾನ ಸಂಸ್ಥೆ ಭವಿಷ್ಯದಲ್ಲಿ ಅದು ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ಪ್ರಕಟಣೆ ಹೊರಡಿಸಿದೆ.