ಕಥೆ ವಿಚಿತ್ರವಾಗಿದೆ. 22 ವರ್ಷದ ಯುವಕನಿಗೆ 42 ವರ್ಷದ ಪತ್ನಿ ಅಮ್ಮ (ಅತ್ತೆ )ಮೇಲೆ ಪ್ರೀತಿ ಚಿಗುರಿದೆ. ಇಬ್ಬರೂ ಮದುವೆ ಕೂಡ ಆಗಿದ್ದಾರೆ. ಬಿಹಾರದ ಮಾಧೇಪುರ ಈ ಲವ್ ಸ್ಟೋರಿಗೆ ಸಾಕ್ಷಿಯಾಗಿದೆ.
ವರದಿ ಪ್ರಕಾರ, ಅತ್ತೆ ಆಶಾ, ಮಗಳು ಲಲಿತಾ ಮನೆಗೆ ಬಂದಿದ್ದಳಂತೆ. ಲಲಿತಾ ಪತಿ ಸೂರಜ್ ಆರೋಗ್ಯ ಸರಿ ಇರಲಿಲ್ಲವಂತೆ. ಈ ಕಾರಣಕ್ಕೆ ಆಶಾ ಮಗಳ ಮನೆಗೆ ಬಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಆಶಾ ಪತಿ ಕೆಲಸದ ನಿಮಿತ್ತ ದೆಹಲಿಯಲ್ಲಿ ವಾಸವಾಗಿದ್ದಾರೆ.
ಜೂನ್ ತಿಂಗಳಿನಲ್ಲಿ ಆಶಾ ಹಾಗೂ ಸೂರಜ್ ಓಡಿ ಹೋಗಿದ್ದಾರೆ. ನಂತ್ರ ಇಬ್ಬರೂ ವಾಪಸ್ ಆಗಿದ್ದಾರೆ. ಇವರಿಬ್ಬರ ಪ್ರೀತಿ ನೋಡಿದ ಪಂಚಾಯತ್ ಯಾವುದೇ ಶಿಕ್ಷೆ ನೀಡಿಲ್ಲ. ಅತ್ತೆ ಹಾಗೂ ಅಳಿಯ ಕೋರ್ಟ್ ನಲ್ಲಿ ಮದುವೆಯಾಗಿದ್ದಾರೆ. ಈಗ ಇಬ್ಬರೂ ಒಟ್ಟಿಗೆ ವಾಸವಾಗಿದ್ದಾರೆ. ಆದ್ರೆ ಇಬ್ಬರೂ ಹಿಂದಿನ ಪತಿ-ಪತ್ನಿಗೆ ವಿಚ್ಛೇದನ ನೀಡಿದ್ದಾರಾ ಇಲ್ಲವಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.