ನೀರು ಕುಡಿಯಲೆಂದು ಕೃಷಿ ಹೊಂಡಕ್ಕಿಳಿದಿದ್ದ ಮೂವರು ಪುಟ್ಟ ಬಾಲಕಿಯರು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಬೆಸ್ತರಪಾಳ್ಯದಲ್ಲಿ ನಡೆದಿದೆ.
ನಾಗರತ್ನ(9), ಹೇಮಲತಾ(7) ಹಾಗೂ ಭವ್ಯಾ(5) ಸಾವನ್ನಪ್ಪಿದವರಾಗಿದ್ದು, ಶಾಲೆಗೆ ರಜೆಯಿದ್ದ ಕಾರಣ ಆಟವಾಡುತ್ತಿದ್ದ ಬಾಲಕಿಯರು, ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬಾಲಕಿಯರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.