ಬಿಜೆಪಿ ಹಿರಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ ಪುತ್ರ ರಾಹುಲ್ ಮಹಾಜನ್, ಪ್ರಧಾನಿ ಮೋದಿ ಕುರಿತು ಟ್ವೀಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯವರನ್ನು ರಾಹುಲ್ ಹೊಗಳಿದ್ದಾರೆ. 13 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ, 2 ವರ್ಷಗಳಿಂದ ಪ್ರಧಾನಿಯಾಗಿರುವ ವ್ಯಕ್ತಿ ಮೇಲೆ ಸಂಪತ್ತು ಗಳಿಕೆ, ಹಣ ದುರುಪಯೋಗ ಅಥವಾ ಯಾವುದೇ ಹಗರಣದ ಆರೋಪವಿಲ್ಲ. ಪದವಿ ಮತ್ತು ಸೂಟ್ ಆರೋಪವಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ರಾಹುಲ್, ಈ ಟ್ವೀಟ್ ನಿಂದ ಸುದ್ದಿಯಲ್ಲಿದ್ದಾರೆ. ಈಗಾಗಲೆ 2 ಸಾವಿರ ಮಂದಿ ರಾಹುಲ್ ಟ್ವೀಟನ್ನು ರೀ ಟ್ವೀಟ್ ಮಾಡಿದ್ದಾರೆ.
ರಾಹುಲ್ ಟ್ವೀಟ್ ರಾಜಕೀಯ ಮಟ್ಟದಲ್ಲಿ ಚರ್ಚೆಯಾಗ್ತಾ ಇದೆ. ವಿವಾದಗಳಿಂದಲೇ ಸುದ್ದಿಯಾಗುವ ಟಿವಿ ಸೆಲೆಬ್ರಿಟಿ ರಾಹುಲ್, ತಂದೆ ಪ್ರಮೋದ್ ಸಾವಿನ ನಂತರವೂ ರಾಜಕೀಯ ಪ್ರವೇಶ ಮಾಡಿಲ್ಲ. ಅವರ ಸಹೋದರಿ ಸಂಸದೆ. ಈವರೆಗೂ ರಾಹುಲ್ ಮಾತ್ರ ರಾಜಕೀಯದಿಂದ ದೂರ ಉಳಿದಿದ್ದಾರೆ. ಈಗ ಮೋದಿ ಹೊಗಳಿ ಟ್ವೀಟ್ ಮಾಡಿರುವ ರಾಹುಲ್ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಗುಸುಗುಸು ಶುರುವಾಗಿದೆ.