ಮುಂಬೈ: ಚಿನ್ನಾಭರಣ ವರ್ತಕರು ಮತ್ತು ಹೂಡಿಕೆದಾರರು, ಖರೀದಿಗೆ ಆಸಕ್ತಿ ತೋರಿದ ಪರಿಣಾಮ, ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನ ಒಂದೇ ದಿನ 540 ರೂ. ಏರಿಕೆ ಕಂಡಿದೆ.
ಪ್ರತಿ 10 ಗ್ರಾಂ ಚಿನ್ನಕ್ಕೆ ಒಂದೇ ದಿನ 540 ರೂಪಾಯಿ ಏರಿಕೆಯಾಗಿದ್ದು, 31,340 ರೂ. ತಲುಪಿದೆ. 2014ರ ಫೆಬ್ರವರಿ 26 ರಂದು 10 ಗ್ರಾಂ ಚಿನ್ನಕ್ಕೆ 31,530 ರೂಪಾಯಿ ಬೆಲೆ ಇತ್ತು. ಶನಿವಾರ ಒಂದೇ ದಿನ 540 ರೂಪಾಯಿ ಏರಿಕೆಯಾಗಿ 31,340 ರೂ. ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿ ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತದೆ. ಕಳೆದ ಗುರುವಾರ ಸ್ಟಾಂಡರ್ಡ್ ಚಿನ್ನ ಪ್ರತಿ 10 ಗ್ರಾಂಗೆ 315 ರೂ. ಏರಿಕೆಯಾಗಿ, 31,080 ರೂ ತಲುಪಿತ್ತು.
ಅದೇ ರೀತಿ ಅಪರಂಜಿ ಚಿನ್ನದ ಬೆಲೆಯಲ್ಲಿಯೂ ಹೆಚ್ಚಳವಾಗಿತ್ತು. ಇದೀಗ, ಚಿನ್ನದ ಖರೀದಿಗೆ ಬೇಡಿಕೆ ಹೆಚ್ಚಾದ ಕಾರಣ, ಮತ್ತೆ ಬೆಲೆಯಲ್ಲಿ ಹೆಚ್ಚಳವಾಗಿದೆ. ಒಂದೇ ದಿನ 540 ರೂಪಾಯಿ ಏರಿಕೆ ಕಂಡಿದ್ದು, 31,340 ರೂಪಾಯಿ ತಲುಪಿದೆ ಎಂದು ಹೇಳಲಾಗಿದೆ.