ಒಂದು ಕಾಲವಿತ್ತು. ಜನರ ಬಾಯಲ್ಲಿ ಪೆಪ್ಸಿ, ಕೋಕಾ ಕೋಲಾದ್ದೇ ಮಾತಾಗಿತ್ತು. ಬಹು ಬೇಡಿಕೆಯ ಪಾನೀಯಗಳಲ್ಲಿ ಈವೆರೆಡು ಟಾಪ್ ನಲ್ಲಿದ್ದವು. ಆದ್ರೆ ಈಗ ಜನ ಬದಲಾಗಿದ್ದಾರೆ. ಜನರ ಟೇಸ್ಟ್ ಬದಲಾಗಿದೆ. ಪೆಪ್ಸಿ, ಕೋಕ್ ಬದಲು ಈ ಪಾನೀಯಗಳು ಫ್ರಿಜ್ ನಲ್ಲಿ ಜಾಗ ಪಡೆಯುತ್ತಿವೆ.
ಯಸ್, ಇವು ಆರೋಗ್ಯಕರ ಪಾನೀಯಗಳು ಎಂಬುದು ಜನರಿಗೆ ಮನದಟ್ಟಾಗ್ತಿದೆ. ಕೋಕ್ ಮತ್ತು ಪೆಪ್ಸಿ ಪಾನಿಯಕ್ಕಿಂತ ಇವು ದಿ ಬೆಸ್ಟ್ ಎನ್ನಿಸಿಕೊಳ್ಳುತ್ತಿವೆ. ಹಾಗಾಗಿ ರಿಯಲ್, ಸ್ಲೈಸ್,ಟ್ರಾಪಿಕಾನಾ ಜ್ಯೂಸ್ ಗಳಿಗೆ ಬೇಡಿಕೆ ಜಾಸ್ತಿಯಾಗ್ತಿದೆ. ಈ ವರ್ಷದ ಆರು ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಐದು ಪಾನೀಯಗಳಲ್ಲಿ ಈ ಮೂರು ಪಾನೀಯಗಳು ಜಾಗ ಪಡೆದಿದ್ದು, ಕೋಕ್ ಹಾಗೂ ಪೆಪ್ಸಿಯನ್ನು ಹಿಂದಿಕ್ಕಿವೆ.
ನೀಲ್ಸನ್ ವರದಿ ಜನರು ಕೋಕ್, ಪೆಪ್ಸಿ ಬದಲು ಆರೋಗ್ಯಕರ ಪಾನೀಯಗಳ ಕಡೆ ವಾಲ್ತಾ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನೀಲ್ಸನ್ ವರದಿ ಪ್ರಕಾರ ಡಾಬರ್ ನ ರಿಯಲ್, ಸ್ಲೈಸ್ ಹಾಗೂ ಟ್ರಾಪಿಕಾನಾ ಪಾನೀಯಗಳನ್ನು ಜನರು ಹೆಚ್ಚಾಗಿ ಸೇವಿಸ್ತಿದ್ದಾರೆ. ಇವುಗಳಿಗೆ ಬೇಡಿಕೆ ಹೆಚ್ಚಾಗ್ತಾ ಇದೆ. ಟ್ಯಾಂಗ್ ಹಾಗೂ Rooh Afza ಕೂಡ ಬೇಡಿಕೆಯ ಪಾನೀಯಗಳಾಗಿವೆ.
2013ರಿಂದ 2014ರವರೆಗೆ ಆಧುನೀಕ ವ್ಯಾಪಾರದಲ್ಲಿ ಪೆಪ್ಸಿ ಮೊದಲ ಸ್ಥಾನದಲ್ಲಿತ್ತು. ಹಿಂದಿನ ವರ್ಷ ಕೋಕ್ ಟಾಪ್ ಐದು ಪಾನಿಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಆದ್ರೆ ಈ ಬಾರಿ ರಿಯಲ್, ಸ್ಲೈಸ್ ಹಾಗೂ ಟ್ರಾಪಿಕಾನಾ ಮೇಲುಗೈ ಸಾಧಿಸಿವೆ.