ಸಾಮಾಜಿಕ ಜಾಲತಾಣ ಟ್ವಿಟ್ಟರ್, ಬಳಕೆದಾರರಿಗೆ ರಾತ್ರಿಯಲ್ಲಿಯೂ ಸರಾಗವಾಗಿ ಕಾರ್ಯ ನಿರ್ವಹಿಸಲು ನೈಟ್ ಮೋಡ್ ಪರಿಚಯಿಸಿದೆ.
ರಾತ್ರಿ ವೇಳೆ ಟ್ವಿಟ್ಟರ್ ಬಳಸುವಾಗ ಕಣ್ಣುಗಳಿಗೆ ಹೆಚ್ಚಿನ ಶ್ರಮವಾಗದಂತೆ ಈ ನೈಟ್ ಮೋಡ್ ಕಾರ್ಯ ನಿರ್ವಹಿಸಲಿದ್ದು, ಬಳಕೆದಾರರಿಗೆ ಆಪ್ತವಾಗಿದೆ.
ಆಂಡ್ರಾಯ್ಡ್ ನಲ್ಲಿ ಟ್ವಿಟ್ಟರ್ ಅಪ್ ಡೇಟ್ ಮಾಡಿಕೊಂಡರೆ ಈ ಸೌಲಭ್ಯ ಲಭ್ಯವಾಗುತ್ತಿದ್ದು, ಪ್ರೊಫೈಲ್ ಲಿಸ್ಟ್ ನಲ್ಲಿಯೇ ನೈಟ್ ಮೋಡ್ ಆನ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ.