ದೇವರ ಸ್ವಂತ ನಾಡು ಕೇರಳದ ಆನೆ, 86 ವರ್ಷದ ದಾಕ್ಷಾಯಿಣಿ ಈಗ ಗಿನ್ನಿಸ್ ದಾಖಲೆಗೆ ಪಾತ್ರವಾಗಲಿದೆ.
ಟ್ರಾವಂಕೂರ್ ದೇವಸ್ವಂ ಬೋರ್ಡ್ ಗೆ ಸೇರಿದ ಈ ಆನೆ, ವಿಶ್ವದ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆ ಹೊಂದಿದೆ. ತೈವಾನ್ ನಲ್ಲಿ ಬದುಕಿದ್ದ 85 ವರ್ಷದ ಆನೆಯೊಂದು 2003 ರಲ್ಲಿ ಸಾವನ್ನಪ್ಪಿದ್ದು ಇದೀಗ 86 ವರ್ಷದ ದಾಕ್ಷಾಯಿಣಿಗೆ ಹಿರಿಯ ಆನೆಯ ಪಟ್ಟ ಸಿಗಲಿದೆ. ಟ್ರಾವಂಕೂರ್ ದೇವಸ್ವಂ ಬೋರ್ಡ್, ಕೇರಳದ 1250 ದೇವಾಲಯದ ಉಸ್ತುವಾರಿಯನ್ನು ಹೊತ್ತಿದ್ದು, ದಾಕ್ಷಾಯಿಣಿ ಸೇರಿದಂತೆ ಒಟ್ಟು 33 ಆನೆಗಳನ್ನು ಹೊಂದಿದೆ.
ಟ್ರಾವಂಕೂರ್ ರಾಜ ಮನೆತನದವರು ದಾಕ್ಷಾಯಿಣಿಯನ್ನು ಕೊಡುಗೆಯಾಗಿ ನೀಡಿದ್ದರೆಂದು ಹೇಳಲಾಗಿದ್ದು, ವಿಶ್ವದ ಹಿರಿಯ ಆನೆ ಎಂಬ ಕೀರ್ತಿಗೆ ಇದು ಪಾತ್ರವಾಗಲಿರುವ ಹಿನ್ನಲೆಯಲ್ಲಿ ಟ್ರಾವಂಕೂರ್ ದೇವಸ್ವಂ ಬೋರ್ಡ್, ದಾಕ್ಷಾಯಿಣಿಯ ಉಸ್ತುವಾರಿ ಹೊತ್ತಿದ್ದ ಒಬ್ಬ ನಿವೃತ್ತ ಹಾಗೂ ಇಬ್ಬರು ಹಾಲಿ ಮಾವುತರನ್ನು ಸನ್ಮಾನಿಸಲಿದೆ.