ಬಾಲಿವುಡ್ ಚಿತ್ರರಂಗದಲ್ಲಿ ಕಳೆದ ಒಂದು ದಶಕಗಳಿಂದಲೂ ತೊಡಗಿಕೊಂಡಿರುವ ನಟಿಯೊಬ್ಬರು ಚಿತ್ರರಂಗದಲ್ಲಿನ ತಮ್ಮ ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
2001 ರಲ್ಲಿ ಬಿಡುಗಡೆಗೊಂಡ ‘ರೆಹನಾ ಹೇ ತೇರೆ ದಿಲ್ ಮೇ’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ದಿಯಾ ಮಿರ್ಜಾ, ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಬಾಲಿವುಡ್ ನಲ್ಲಿ ಪ್ರತಿಭೆಗೆ ಬೆಲೆಯಿಲ್ಲ. ಇಲ್ಲೇನಿದ್ದರೂ ಚಿತ್ರವೊಂದರ ಯಶಸ್ಸಿನ ಮೇಲೆ ನಟ, ನಟಿಯರ ಭವಿಷ್ಯ ನಿರ್ಧಾರವಾಗುತ್ತದೆ ಎಂದಿದ್ದಾರೆ.
ಸದ್ಯ ಇಂಡೋ- ಇರಾನ್ ಚಿತ್ರ ‘ಸಲಾಂ ಮುಂಬೈ’ ನಲ್ಲಿ ನಟಿಸುತ್ತಿರುವ ಈ ನಟಿ, ಇದೇ ಪ್ರಥಮ ಬಾರಿಗೆ ಭಾರತ ಮತ್ತು ಇರಾನ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದು, ಇರಾನ್ ನಲ್ಲಿ ನಡೆದ ಚಿತ್ರೀಕರಣದ ವೇಳೆ ಅಲ್ಲಿನ ಜನ ತಮ್ಮನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.