ಸದಾ ಜನಜಂಗುಳಿಯಿಂದ ಕೂಡಿರುವ, ಟ್ರಾಫಿಕ್ ಕಿರಿ ಕಿರಿಯಿಂದ ಬೇಸತ್ತು ಹೋಗಿದ್ದ ದೇಶದ ವಾಣಿಜ್ಯ ನಗರಿ ಮುಂಬೈನ ಜನತೆಗೆ ಇತ್ತೀಚೆಗೆ ಆಶ್ಚರ್ಯವೊಂದು ಕಾದಿತ್ತು.
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಆರಂಭಿಸಿದ್ದು, ಇದನ್ನು ನೋಡಿದ ಜನತೆ ಮೊದಲು ಶಾಕ್ ಆದರಾದರೂ ಬಳಿಕ ಕೆಲ ಸಮಯ ತಮ್ಮ ಒತ್ತಡವನ್ನು ಮರೆತು ಎಂಜಾಯ್ ಮಾಡಿದ್ದಾರೆ.
ದಾರಿಹೋಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಇದರ ವಿಡಿಯೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ.